ಫೈನಲ್ ತಲುಪಿದ ಸಿಂಧೂ

0
196
ಏಜೆನ್ಸೀಸ್ ಹೊಸದಿಲ್ಲಿ

ಥಾಯ್ಲೆಂಡ್‌ನ ರಚನಾಕ್ ಇಂತನಾನ್ ವಿರುದ್ಧ 21-16, 25-23 ಅಂತರದಲ್ಲಿ ಜಯ ಗಳಿಸಿದ ಭಾರತದ ಪಿ.ವಿ. ಸಿಂಧೂ  ಗಾಂಗ್‌ಜೌನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್   ವಿಶ್ವ ಟೂರ್ ಫೈನಲ್ಸ್‌ನ  ಫೈನಲ್ ತಲುಪಿದ್ದಾರೆ.

ಸಿಂಧೂ  ವಿಶ್ವ ಟೂರ್‌ನಲ್ಲಿ ಎರಡನೇ ಬಾರಿ ಫೈನಲ್ ತಲುಪಿದ್ದಾರೆ. ಪುರುಷರ ವಿಭಾಗದಲ್ಲಿ ಸಮೀರ್ ವರ್ಮಾ ಸೋಲಿಗೆ ಶರಣಾದರು.
ಅತ್ಯಂತ ರೋಚಕವಾಗಿ ನಡೆದ ಸೆಮಿೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧೂ  ೫೪ ನಿಮಿಷಗಳಲ್ಲಿ ಜಯದ ನಗು ಬೀರಿದರು. ಟೂರ್ನಿಯಲ್ಲಿ ಇದುವರೆಗೂ ಸೋಲರಿಯದ ಸಿಂಧೂ  ಫೈನಲ್ ಪಂದ್ಯದಲ್ಲಿ ಜಪಾನಿನ ನೊಜೊಮಿ ಒಕುಹರ ವಿರುದ್ಧ ಸೆಣಸಲಿದ್ದಾರೆ. ಇದು ಕಳೆದ ವರ್ಷದ ಫೈನಲ್ ಪಂದ್ಯದ ಪುನರಾವರ್ತನೆಯಾಗಿರುತ್ತದೆ.
ಪುರುಷರ ಸೆಮಿಫೈನಲ್‌ನಲ್ಲಿ ಸಮೀರ್ 12-21, 22-20, 21-17 ಅಂತರದಲ್ಲಿ ಶಿ ಯುಕಿ ವಿರುದ್ಧ ಸೋಲನುಭವಿಸಿದರು.