Thursday, September 12, 2024

ಆರ್ಮಿ ರೆಡ್‌ಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನಲ್ಲಿ ನಡೆದ 68ನೇ ಅಂತರ್ ಸರ್ವಿಸಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆರ್ಮಿ ರೆಡ್ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಜಾಲಹಳ್ಳಿಯ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ  ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸುವ ಅಥ್ಲೀಟ್‌ಗಳನ್ನು ಆಯ್ಕೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. ಸೆ. 18ರಿಂದ 20ರವರೆಗೆ ಚಾಂಪಿಯನ್‌ಷಿಪ್ ನಡೆದಿತ್ತು.
ಚಾಂಪಿಯನ್ ರೆಡ್ ತಂಡಕ್ಕೆ  ಟ್ರೈನಿಂಗ್ ಕಮಾಂಡ್ ಐಎಎಫ್ ನ  ಎಒಸಿ ಇನ್ ಚಾರ್ಜ್ ಏರ್ ಮಾರ್ಷಲ್ ಆರ್‌ಕೆಎಸ್ ಬಹದುರಿಯಾ ಬಹುಮಾನ ವಿತರಿಸಿದರು.

Related Articles