ಅಹಮದಾಬಾದ್:
36ನೇ ರಾಷ್ಟ್ರೀಯ ಕ್ರಿಡಾಕೂಟದ ಅಥ್ಲೆಟಿಕ್ಸ್‌ನ ಹೈಜಂಪ್ ವಿಭಾಗದಲ್ಲಿ ಕರ್ನಾಟಕದ ಚೇತನ್ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಸರ್ವಿಸಸ್‌ನ ಸರ್ವೇಶ್ 2.27 ಮೀ. ಎತ್ತರಕ್ಕೆ ಜಿಗಿದು ಚಿನ್ನ ಗೆದ್ದರೆ, ಕೇರಳ ಅರೋಮಲ್ 2.19 ಮೀ. ಎತ್ತರಕ್ಕೆ ಜಿಗಿದು ಬೆಳ್ಳಿ ಪದಕ ಗೆದ್ದರು. 2.17 ಮೀ ಎತ್ತರಕ್ಕೆ ಜಿಗಿದ ಚೇತನ್ ಹಾಗೂ ಭಾರತಿ ವಿ. ಕಂಚಿನ ಪದಕ ಗೆದ್ದರು.
ರಿಲೇಯಲ್ಲಿ ಕರ್ನಾಟಕದ ಮಹಿಳೆಯರ ತಂಡ ಕಂಚಿನ ಪದಕ ಗೆದ್ದಿದೆ. 4×400 ಮೀ. ರಿಲೆಯಲ್ಲಿ ವಿಜಯ ಕುಮಾರಿ, ಸಿಂಚಲ, ಇಂಚರ ಮತ್ತು ಲಿಖಿತ ಅವರನ್ನೊಳಗೊಂಡ ತಂಡ 3 ನಿಮಿಷ ಹಾಗೂ 36.50 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಗಳಿಸಿತು.
ಟೆನಿಸ್‌ನಲ್ಲಿ ಕರ್ನಾಟಕದ ಪುರುಷರ ತಂಡ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ.