ಸ್ಪೋರ್ಟ್ಸ್ ಮೇಲ್ ವರದಿ
ಅಜಿಂಕ್ಯ ರಹಾನೆ (148) ಹಾಗೂಶ್ರೇಯಸ್ ಅಯ್ಯರ್ (110) ಅವರ ಆಕರ್ಷಕ ಶತಕದ ನೆರವಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಯಲ್ಲಿ ಮುಂಬೈ ತಂಡ ಕರ್ನಾಟಕವನ್ನು 88 ರನ್ ಗಳ ಅಂತರದಲ್ಲಿ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 362 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಕರ್ನಾಟಕ 45 ಓವರ್ ಗಳಲ್ಲಿ 274 ರನ್ ಗಾಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಮಾಯಾಂಕ್ ಅಗರ್ವಾಲ್ 66 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರು ಮುಂಬೈ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು.
ಆಲೂರಿನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ವಿದರ್ಭಾ ವಿರುದ್ಧ 141 ರನ್ ಗಳ ಬೃಹತ್ ಜಯ ಗಳಿಸಿದೆ. ಪಂಜಾಬ್ ತಂಡದ 274 ರನ್ ಗಳಿಗೆ ಉತ್ತರವಾಗಿ ವಿದರ್ಭಾ 40.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿತ್ತು. ವಿದರ್ಭ ಪರ ಕನ್ನಡಿಗ ಗಣೇಶ್ ಸತೀಶ್ 60 ರನ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಆಲೂರಿನಲ್ಲಿ ನಡೆದ ದಿನದ ಇನ್ನೊಂದು ಪಂದ್ಯದಲ್ಲಿ ಗೋವಾ ತಂಡ ರೈಲ್ವೇಸ್ ವಿರುದ್ಧ 42 ರನ್ ಅಂಅಂತರದಲ್ಲಿ ಜಯ ಗಳಿಸಿದೆ.