Sunday, December 10, 2023

Sheetal Devi ನಿಮಗೆ ಇಷ್ಟವಾದ ಯಾವುದೇ ಕಾರನ್ನು ಆಯ್ಕೆ ಮಾಡಿಕೊಳ್ಳಿ: ಆನಂದ್‌ ಮಹೀಂದ್ರಾ

ಹೊಸದಿಲ್ಲಿ: ಎರಡೂ ಕೈ ಇಲ್ಲದಿದ್ದರೂ ಕಾಲಿನಲ್ಲೇ ಗುರಿ ಇಟ್ಟು ಎರಡು ಪದಕಗಳನ್ನು ಗೆದ್ದ ಭಾರತದ ಬಿಲ್ಗಾರ್ತಿ ಶೀತಲ್‌ ದೇವಿ ಅವರಿಗೆ ಭಾರತದ ಶ್ರೇಷ್ಠ ಉದ್ಯಮಿ ಆನಂದ್‌ ಮಹೀಂದ್ರಾ Anand Mahindra ಅವರು ಅದ್ಭುತವಾದ ಉಡುಗೊರೆ ನೀಡಿದ್ದಾರೆ. Anand Mahindra pledged to gift a customized car to extend his support to Sheetal Devi

ಉನ್ನತ ಶ್ರೇಣಿಯ ಹಾಗೂ ಶೀಲತ್‌ ದೇವಿ ಅವರಿಗಾಗಿಯೇ ಸಿದ್ಧಪಡಿಸುವ ಮಹೀಂದ್ರಾ ಕಾರನ್ನು ನೀಡಲಿದ್ದಾರೆ. ತಮ್ಮ ಕಂಪೆನಿ ಉತ್ಪಾದಿಸುವ ಯಾವುದೇ ಕಾರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಉದ್ಯಮಿ ಅವರು ಟ್ವೀಟ್‌ ಮಾಡಿದ್ದು. ಶೀತಲ್‌ ನಮ್ಮ ಪಾಲಿಗೆ ಶಿಕ್ಷಕಿ. ಇನ್ನು ಮುಂದೆ ನನ್ನ ಬದುಕಿನ ಯಾವುದೇ ಸಮಸ್ಯೆಯನ್ನು ಹೇಳಿಕೊಳ್ಳುವುದಿಲ್ಲ. ಶೀತಲ್‌ ನೀವು ನಮಗೆಲ್ಲರಿಗೂ ಗುರು ಇದ್ದಾ ಹಾಗೆ. ನಮ್ಮ ಕಂಪೆನಿಯ ಯಾವುದೇ ಕಾರನ್ನು ಆಯ್ಕೆ ಮಾಡಿಕೊಳ್ಳಿ, ನಾವು ಅದನ್ನು ನಿಮಗಾಗಿ, ನಿಮ್ಮ ಅನುಕೂಲಕ್ಕಾಗಿ ಸಿದ್ಧ ಮಾಡಿಕೊಡುತ್ತೇವೆ,” ಎಂದು ಆನಂದ್‌ ಮಹೀಂದ್ರಾ ಅವರು ತಿಳಿಸಿದ್ದಾರೆ.

ಕೈಗಳಿಲ್ಲದೆ ಕಾಲಿನಲ್ಲೇ ಗುರಿ ಇಟ್ಟು ಚಿನ್ನ ಗೆದ್ದ ಜಗತ್ತಿನ ಮೊದಲ ಬಿಲ್ಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶೀತಲ್‌ ದೇವಿ, ಚೀನಾದ ಹಾಂಗ್ಜೌನಲ್ಲಿ ನಡೆದ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕ ಗೆದ್ದು ಜಗತ್ತಿನ ಗಮನ ಸೆಳೆದಿದ್ದರು.

Related Articles