Friday, October 4, 2024

ಸ್ನಾಯು ಸೆಳೆತದಿಂದ ಚಿನ್ನ ಕಳೆದುಕೊಂಡ ಬೈಂದೂರಿನ ಮಣಿಕಂಠ

ಪಣಜಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಓಟಗಾರ ಮಣಿಕಂಠ ಚಿನ್ನ ಗೆಲ್ಲುವಲ್ಲಿ ವಿಫಲರಾಗಿ ಅಚ್ಚರಿ ಎಂಬಂತೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಂತಿಮ ಕ್ಷಣದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾದದು ಮಣಿಕಂಠ ಅವರ ಯಶಸ್ಸಿಗೆ ಅಡ್ಡಿಯಾಯಿತು. Due to injury Manikanta fail to win the medal.

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಮಣಿಕಂಠ 10:23 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದರು. ಆದರೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಪದಕದಿಂದ ವಂಚಿತರಾದದ್ದು ಕನ್ನಡಿಗರ ಪಾಲಿಗೆ ನೋವಿನ ಸಂಗತಿ. 22 ವರ್ಷದ ಮಣಿಕಂಠ 50 ಮೀಟರ್‌ ಓಡುವವರೆಗೂ ಮುನ್ನಡೆ ಕಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಹಿನ್ನಡೆ ಕಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ತಮಿಳುನಾಡಿನ ಇ.ಕೆ. ಎಲಕ್ಕಿಯಾದಾಸನ್‌ ಚಿನ್ನ ಗೆದ್ದರು.

ವನಿತೆಯರ ವಿಭಾಗದಲ್ಲಿ ತಮಿಳುನಾಡಿನ ಓಟಗಾರ್ತಿಯನ್ನು ಹಿಂದಿಕ್ಕಿದ ಕರ್ನಾಟಕದ ಸ್ನೇಹ ಚಿನ್ನ ಗೆದ್ದರು. ತಮಿಳುನಾಡಿನ ಗಿರಿಧರಣಿ ಬೆಂಗಳೂರಿನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಆಗ ಸ್ನೇಹ ಅವರಿಗೆ ಯಶಸ್ಸು ಸಿಗಲಿಲ್ಲ. ಆದರೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಸ್ನೇಹ ಯಶಸ್ವಿಯಾದರು.

Related Articles