Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಹಾಕಿ: ಸೆಮಿಫೈನಲ್‌ಗೆ ಕರ್ನಾಟಕ ಪೊಲೀಸ್

sportsmail:

ಜಾರ್ಖಂಡ್‌ ಪೊಲೀಸ್‌ ತಂಡವನ್ನು ರೋಚಕ 1-0 ಗೋಲಿನ ಅಂತರದಲ್ಲಿ ಮಣಿಸಿದ ಕರ್ನಾಟಕ ಪೊಲೀಸ್‌ ತಂಡ ಬೆಂಗಳೂರು ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 70ನೇ ಅಖಿಲ ಭಾರತ ಪೊಲೀಸ್‌ ಹಾಕಿ ಚಾಂಪಿಯನ್ಷಿಪ್‌ನ ಫೈನಲ್‌ ತಲುಪಿದೆ.

ಉಮೇಶ್‌ ಆರ್.‌ ಮಟೆಗಾರ್‌ ಅವರು 54ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಕರ್ನಾಟಕ ಜಯ ಗಳಿಸಿ ಸೆಮಿಫೈನಲ್‌ ಪ್ರವೇಶಿಸಿತು, ಸೆಮಿಫೈನಲ್‌ನಲ್ಲಿ ರಾಜ್ಯ ತಂಡ ಐಟಿಬಿಪಿ ಜಾಲಂಧರ್‌ ವಿರುದ್ಧ ಸೆಣಸಲಿದೆ. ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ತಮಿಳುನಾಡು ಮತ್ತು ಪಂಜಾಬ್‌ ಪೊಲೀಸ್‌ ತಂಡಗಳು ಸೆಣಸಲಿವೆ.

ಕ್ವಾರ್ಟರ್‌ ಫೈನಲ್‌ ಪಂದ್ಯದ ಮೂರು ಕ್ವಾರ್ಟರ್‌ ಅವಧಿ ಗೋಲಿಲಲ್ಲದೆ ಅಂತ್ಯಗೊಂಡಿತ್ತು, ಆದರೆ ಅಂತಿಮ ಕ್ವಾರ್ಟರ್‌ ಅವಧಿಯಲ್ಲಿ ಕರ್ನಾಟಕ ಮೇಲುಗೈ ಸಾಧಿಸಿತು. ಜಾರ್ಖಂಡ್‌ ನಂತರ ಯಾವುದೇ ಪ್ರಯತ್ನ ಮಾಡಿದರೂ ಗೋಲು ಗಳಿಸುವಲ್ಲಿ ವಿಫಲವಾಯಿತು.

ದಿನದ ಎರಡನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ತಮಿಳುನಾಡು ಪೊಲೀಸ್‌ ತಂಡ ಒಡಿಶಾ ಪೊಲೀಸ್‌ ವಿರುದ್ಧ 2-1 ಗೋಲುಗಳಿಂದ ಜಯ ಗಳಿಸಿದೆ. ಪಂಜಾಬ್‌ ಪೊಲೀಸ್‌ ತಂಡ ಸಿಐಎಸ್‌ಎಫ್‌ ದೆಹಲಿ ವಿರುದ್ಧ 2-0 ಗೋಲುಗಳಿಂದ ಜಯ ಗಳಿಸಿದ ಸೆಮಿಫೈನಲ್‌ ಪ್ರವೇಶಿಸಿದೆ.

ದಿನದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಐಟಿಬಿಪಿ ಜಾಲಂಧರ್‌ ತಂಡ ಸಿಆರ್‌ಪಿಎಫ್‌ ಜಾಲಂಧರ್‌ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆದ್ದು ಅಂತಿಮ ನಾಲ್ಕರ ಹಂತ ತಲುಪಿತು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.