ದೆಹಲಿ:
ಭಜ್‌ರಂಗ್ ಪೂನಿಯಾ ಸೇರಿದಂತೆ 24 ಹಿರಿಯ ಕುಸ್ತಿಪಟುಗಳನ್ನು ಕೇಂದ್ರ ವಾರ್ಷಿಕ ಒಪ್ಪಂದಕ್ಕೆೆ ಭಾರತೀಯ ಕುಸ್ತಿ ಫೆಡರೇಷನ್ ಆಯ್ಕೆ ಮಾಡಿದ್ದು, ಇದು ಕಳೆದ 15 ರಿಂದಲೇ ಅನ್ವಯವಾಗಿದೆ.
ಭಜರಂಗ್ ಪೂನಿಯಾ, ವಿನೇಶ್ ಪೊಗಾಟ್ ಮತ್ತು ಪೂಜಾ ಧಾಂಡ ಅವರು ಎ ದರ್ಜೆಯಲ್ಲಿದ್ದು, ಇನ್ನುಳಿದವರನ್ನು ಬಿ ಮತ್ತು ಸಿ ಗೆ ಪರಿಗಣಿಸಲಾಗಿದೆ. ಮೂರು ದರ್ಜೆಯವರು ವಾರ್ಷಿಕವಾಗಿ 30 ಲಕ್ಷ ರೂ. ಪಡೆಯಲಿದ್ದಾಾರೆ. ಇದರೊಂದಿಗೆ ಭಾರತ ಒಲಿಂಪಿಕ್ ಅಸೋಸಿಯೇಷನ್ ವ್ಯಾಾಪ್ತಿಯಲ್ಲಿ ವಾರ್ಷಿಕ ಒಪ್ಪಂದ ಮಾಡಿಕೊಂಡಿರುವ ಮೊದಲ ಫೆಡರೇಷನ್ ಎಂಬ ದಾಖಲೆಗೆ ಕುಸ್ತಿ ಫೆಡರೇಷನ್ ಭಾಜನವಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಳೆದ ಹಲವು ವರ್ಷಗಳಿಂದ ಇದೇ ಮಾದರಿಯಲ್ಲಿ ಆಟಗಾರರಿಗೆ ಅನುಸರಿಸುತ್ತಿದೆ. ಇದಕ್ಕಿಂತ ಉತ್ತಮವಾದದ್ದು, ಮತ್ತೊಂದಿಲ್ಲ. ಇದು ಕುಸ್ತಿ ಪಟುಗಳಿಗೆ ಬೆನ್ನೆೆಲುಬು ಇದ್ದಂತೆ ಎಂದು ಭಜರಂಗ್ ಪೂನಿಯಾ ತಿಳಿಸಿದರು.