Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಯಾಂಕೀಸ್‌ ಕ್ರಿಕೆಟ್‌ ಕ್ಲಬ್‌ ಮೆಟ್ರೋ ಶೀಲ್ಡ್‌ ಚಾಂಪಿಯನ್‌

ಬೆಂಗಳೂರು: ಇಲ್ಲಿನ ಆಲೂರು ಅಂಗಣದಲ್ಲಿ ಮೆಟ್ರೋ ಶೀಲ್ಡ್‌ಗಾಗಿ ನಡೆದ ನಡೆದ ಕೆಎಸ್‌ಸಿಎ ಗ್ರೂಪ್‌ 1 -VI ಡಿವಿಜನ್‌ ಹಾಗೂ ನಾಕೌಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ್‌ ಕ್ರಿಕೆಟ್‌ ಕ್ಲಬ್‌ ವಿರುದ್ಧ  7 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಯಾಂಕೀಶ್‌ ಕ್ರಿಕೆಟ್‌ ಕ್ಲಬ್‌ ಚಾಂಪಿಯನ್‌‌ ಪಟ್ಟ ಗೆದ್ದುಕೊಂಡಿದೆ. Yankees cricket club won the KSCA Metro Shield defeating Bharath cricket Club by 7 wickets.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ್‌ ಕ್ರಿಕೆಟ್‌ ಕ್ಲಬ್‌ 39.5 ಓವರ್‌ಗಳಲ್ಲಿ 182 ರನ್‌ಗೆ ಆಲೌಟ್‌ ಆಯಿತು. ತಂಡದ ಪರ ಪುನೀತ್‌ ಪೈ 20 ರನ್‌ ಗಳಿಸಿ ಬೇಗನೇ ವಿಕೆಟ್‌ ಒಪ್ಪಿಸಿದರು. ರಘು ಎಂ. ಯಾಂಕೀಸ್‌ ಬೌಲಿಂಗ್‌‌ ದಾಳಿಯನ್ನು ಸಮರ್ಥವಾಗಿ ಎದುರಿಸಿ 81 ಎಸೆತಗಳಿಂದ ಅಜೇಯ 80 ರನ್‌ ಗಳಿಸಿ ಸಾಧಾರಣ ಮೊತ್ತಕ್ಕೆ ನೆರವಾದರು. ರಘು ಎಂ ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿತ್ತು.

ಯಾಂಕೀಸ್‌ ಪರ ಓಂಕಾರ್‌ ಎಚ್‌ ಆರ್‌ 18 ರನ್‌ಗೆ 2 ವಿಕೆಟ್‌ ಗಳಿಸಿದರೆ ರಮೇಶ್‌ 44 ರನ್‌ಗೆ 2 ವಿಕೆಟ್‌, ಚೇತನ್‌ ಎಸ್‌‌ ವಿಲಿಯಮ್ಸ್‌ 43 ರನ್‌ಗೆ 2 ವಿಕೆಟ್‌ ಹಾಗೂ ಅಮೀರ್‌‌ ಹಮ್ಜಾ 41 ರನ್‌ಗೆ 3 ವಿಕೆಟ್‌ ಗಳಿಸಿ ಭಾರತ್‌ ತಂಡದ ರನ್‌ ಗಳಿಕೆಗೆ ಕಡಿವಾಣ ಹಾಕಿದರು.

183 ರನ್‌ ಜಯದ ಗುರಿ ಹೊತ್ತ ಯಾಂಕೀಸ್‌‌ 35.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 187 ರನ್‌ ಗಳಿಸಿ ಚಾಂಪಿಯನ್‌‌ ಪಟ್ಟ ಗೆದ್ದುಕೊಂಡಿತು. ತಂಡದ ಪರ ಅರ್ಣವ್‌ ಅನೀಲ್‌ 50 ರನ್‌ ಗಳಿಸಿ ಜಯಕ್ಕೆ ಉತ್ತಮ ತಳಪಾಯ ಹಾಕಿದರು. ಅವರು 80 ಎಸೆತಗಳನ್ನೆದುರಿಸಿ 6 ಬೌಂಡರಿ ನೆರವಿನಿಂದ ಅಮೂಲ್ಯ ಅರ್ಧ ಶತಕ ದಾಖಲಿಸಿದರು. ನಿರ್ಮಲ್‌ ಎಸ್‌ 23 ಹಾಗೂ ಅನುರಾಗ್‌ ಬಾಜಪೇಯ್‌ 22 ಕಡಿಮೆ ಮೊತ್ತಕ್ಕೆ ಪೆವಿಲಿಯನ್‌ ಸೇರಿದರೂ ಅನುಭವಿ ಆಟಗಾರ ಸಿ. ಎಂ. ಗೌತಮ್‌ ಅಜೇಯ 58 ರನ್‌ ಸಿಡಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಗೌತಮ್‌ 41 ಎಸೆತಗಳನ್ನೆದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್‌ ಮೂಲಕ 58* ರನ್‌ ಗಳಿಸಿ ಜಯದ ರೂವಾರಿ ಎನಿಸಿದರು. ನಿಶಾಂತ್‌ ಸಿಂಗ್‌ ಶೆಕಾವತ್‌ ಅಜೇಯ 24 ರನ್‌ ಗಳಿಸಿ ಸುಲಭ ಜಯಕ್ಕೆ ನೆರವಾದರು.


administrator