Sunday, September 8, 2024

ಟೆಕ್ವಾಂಡೋ ತಂಡಕ್ಕೆ ಗುಡ್ ಲಕ್

ಸ್ಪೋರ್ಟ್ಸ್ ಮೇಲ್ ವರದಿ

ಬೆಲಾರೂಸ್‌ನಲ್ಲಿ ನಡೆಯಲಿರುವ  ಜೂನಿಯರ್ ಹಾಗೂ ಹಿರಿಯರ ವಿಶ್ವ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರಿಗೆ  ಕಿಟ್ ವಿತರಣಾ ಸಮಾರಂ‘ ಬೆಂಗಳೂರಿನ ಅಮೃತ ನಗರದಲ್ಲಿ ನಡೆಯಿತು. ಆರ್ಟಿಜೆನ್ ಇಂಟೀರಿಯರ್ಸ್  ಭಾರತವನ್ನು ಪ್ರತಿನಿಧಿಸುತ್ತಿರುವ ಸ್ಪರ್ಧಿಗಳಿಗೆ ಕಿಟ್‌ಗಳನ್ನು ವಿತರಿಸಿದರು.

ಬೆಲಾರೂಸ್‌ನಲ್ಲಿ 19 ರಿಂದ 27 ರವರೆಗೆ 13ನೇ ಜೂನಿಯರ್ ಹಾಗೂ 8ನೇ ಹಿರಿಯರ ವಿಶ್ವ ಐಟಿಎಫ್  ಟೆಕ್ವಾಂಡೋ ಚಾಂಪಿಯನ್‌ಷಿಪ್ ನಡೆಯಲಿದೆ.
 ಭಾಗವಹಿಸಲಿರುವ  ಭಾರತ ತಂಡದಲ್ಲಿ ಎಲ್ಲರೂ ಕರ್ನಾಟಕದವರು ಎಂದು ತಿಳಿಸಲು ಹೆಮ್ಮೆಯ ಸಂಗತಿ.  ಎಂದು ಕರ್ನಾಟಕ ಟೆಕ್ವಾಂಡೋ ಸಂಸ್ಥೆಯ ಕಾರ್ಯದರ್ಶಿ ಹಾಗೂ ಭಾರತೀಯ ಟೆಕ್ವಾಂಡೋ ಫೆಡರೇಷನ್‌ನ ಸಂಘಘಟನಾ ಸಮಿತಿಯ ಕಾರ್ಯದರ್ಶಿ ಸಬುಂ ಪ್ರದೀಪ್ ಜೆ ತಿಳಿಸಿಸಿದ್ದಾರೆ. ಈ ಸಂದರ್ಭದಲ್ಲಿ  ಮಾತನಾಡಿದ ಸ್ಥಳೀಯ ಕಾರ್ಪೋರೇಟರ್ ಪಿ.ವಿ. ಮಂಜುನಾಥ್ , ಕರ್ನಾಟಕ ಟೆಕ್ವಾಂಡೋ ಸಂಸ್ಥೆಯ ತರಬೇತಿಗಾಗಿ ಎಲ್ಲ ರೀತಿಯ ನೆರವನ್ನು ನೀಡಲಾಗುತ್ತಿದೆ. ಈಗಾಗಲೇ ಸರಕಾರದಿಂದ ೨೫ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ತರಬೇತಿ ಕೇಂದ್ರ ಸ್ಥಾಪಿಸುವುದಕ್ಕಾಗಿ ಇನ್ನೂ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡುವಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ಪಾತ್ರ ಪ್ರಮುಖವಾದುದು ಎಂದರು.
ತಂಡದಲ್ಲಿ ೧೨ ಸ್ಪರ್ಧಿಗಳು ಕನ್ನಡಿಗರಾಗಿರುತ್ತಾರೆ. ಬೆಂಗಳೂರಿನ ಅಮೃತ ನಗರದಲ್ಲಿರುವ ಶಾರದಾ ವಿದ್ಯಾಲಯದ ಸಮೀಪವಿರುವ ಅಮೃತ ಹಳ್ಳಿ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಈ ಸ್ಪರ್ಧಿಗಳು ಕಳೆದ ೮ ತಿಂಗಳಿಂದ ನಿರಂತರ ಅಭ್ಯಾಸ ಮಾಡಿರುತ್ತಾರೆ.

Related Articles