Saturday, July 20, 2024

ರಷ್ಯಾಕ್ಕೆ ಹೊರಟ ಕನ್ನಡ ಟೆಕ್ವಾಂಡೋ ಸೇನೆ

ಸ್ಪೋರ್ಟ್ಸ್ ಮೇಲ್ ವರದಿ

ಬೆಲಾರೂಸ್‌ನಲ್ಲಿ ಇದೇ ತಿಂಗಳ 19 ರಿಂದ 27 ರವರೆಗೆ ನಡೆಯಲಿರುವ ೧೩ನೇ ಜೂನಿಯರ್ ಹಾಗೂ 8ನೇ ಹಿರಿಯರ ವಿಶ್ವ ಐಟಿಎಫ್  ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಎಲ್ಲರೂ ಕರ್ನಾಟಕದವರು ಎಂದು ತಿಳಿಸಲು ಹೆಮ್ಮೆಯ ಸಂಗತಿ. ಈ ಸಾಧಕರಿಗೆ ಬೀಳ್ಕೊಡುವ ಹಾಗೂ ಕಿಟ್ ವಿತರಣಾ ಸಮಾರಂಭ  ಭಾನುವಾರ ಬೆಂಗಳೂರಿನ ಅಮೃತ ನಗರದಲ್ಲಿ ನಡೆಯಲಿವೆ ಎಂದು ಕರ್ನಾಟಕ ಟೆಕ್ವಾಂಡೋ ಸಂಸ್ಥೆಯ ಕಾರ್ಯದರ್ಶಿ ಹಾಗೂ  ಭಾರತೀಯ ಟೆಕ್ವಾಂಡೋ  ಫೆಡರೇಷನ್‌ನ ಸಂಘಟನಾ ಸಮಿತಿಯ ಕಾರ್ಯದರ್ಶಿ ಸಬುಂ ಪ್ರದೀಪ್ ಜೆ ತಿಳಿಸಿಸಿದ್ದಾರೆ.

ತಂಡದಲ್ಲಿ 12 ಸ್ಪರ್ಧಿಗಳು ಕನ್ನಡಿಗರಾಗಿರುತ್ತಾರೆ. ಬೆಂಗಳೂರಿನ ಅಮೃತ ನಗರದಲ್ಲಿರುವ ಶಾರದಾ ವಿದ್ಯಾಲಯದ ಸಮೀಪವಿರುವ ಅಮೃತ ಹಳ್ಳಿ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಈ ಸ್ಪರ್ಧಿಗಳು ಕಳೆದ ೮ ತಿಂಗಳಿಂದ ನಿರಂತರ ಅಭ್ಯಾಸ ಮಾಡಿರುತ್ತಾರೆ. ವೈಯಕ್ತಿಕ ಸ್ಪೇರಿಂಗ್, ವೈಯಕ್ತಿಕ ಪ್ಯಾಟರ್ನ್ಸ್, ವೈಯಕ್ತಿಕ ಪವರ್ ಬ್ರೇಕಿಂಗ್, ಸ್ಪೆಷಲ್ ಟೆಕ್ನಿಕ್ ಸೇರಿದಂತೆ ಎಲ್ಲರೂ ವೈಯಕ್ತಿಕ ಎಲ್ಲ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ. ಅದೇ ರೀತಿ ತಂಡ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ. ಆರನೇ ಡಾನ್ ಬ್ಲ್ಯಾಕ್ ಬೆಲ್ಟ್ ಗೌರವ ಪಡೆದಿರುವ, ಅಂತಾರಾಷ್ಟ್ರೀಯ ಇನ್‌ಸ್ಟ್ರಕ್ಟರ್, ಎಕ್ಸಮೈನರ್ ಮತ್ತು ಎ ಕ್ಲಾಸ್ ಅಂಪೈರ್ ಸಬುಮ್ ಪ್ರದೀಪ್ ಜೆ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡದ ವಿವರ
14 ರಿಂದ 15 ವರ್ಷ
1.ಖವೈಶ್ ಪನ್ವಾರ್ (೪೫ ಕೆಜಿ), 2. ರಜತ್ ಕುಂಜನ್ ಕುಟ್ಟಿಪುರಂ (೫೦ ಕೆಜಿ), 3. ಅನನ್ಯ ಗುರುಮೂರ್ತಿರಾಜು (೪೦ ಕೆಜಿ), ೪. ಏಂಜಲೋ ಲೆವಿ ಮಾನ್ವೆಲ್ (೭೦ ಕೆಜಿ), ೫. ಕಾಥೀರ್ ವಿರುಥನ್ ಎಲಾಂಗ್ವನ್ (೭೦ ಕೆಜಿ), ೬. ಕವನ ಕೃಷ್ಣಪ್ಪ (೪೦ ಕೆಜಿ).
ಜೂನಿಯರ್ ವಿಭಾಗ
೧.ಅಕ್ಷತಾ ಗಂಗನರಸಯ್ಯ (೫೨ ಕೆಜಿ), ೨. ಬೇಗುರ್ ಕುಮಾರ್ ಕಿಶೋರ್ (೪೬ ಕೆಜಿ)
ಹಿರಿಯರ ವಿಭಾಗ
೧.ನಂದನ ಸಬರಪತಿ ರಾಮಮೂರ್ತಿ (ಗೋಲ್ಡ್ ಕ್ಲಾಸ್).
ತರಬೇತುದಾರರು
೧.ನವೀನ್ ರಾಜ್ ಜಿ. (೪ನೇ ಡಾನ್, ಕೋಚ್)
೨. ಮನೀಶ್ ಕುಮಾರ್(೧ ಡಾನ್, ಕೋಚ್)
ಅಂಪೈರ್‌ಗಳು
೧.ಮಾಸ್ಟರ್ ಡಾ. ರಾಜೇಂದ್ರ ಬಾಲನ್ (೮ನೇ ಡಾನ್, ಹೊಸದಿಲ್ಲಿ)
೨.ಮಾಸ್ಟರ್ ಡಾ. ಅಬ್ದುರ್ ರೆಹಮಾನ್ ಮಂಗಲಸ್ಸೆರಿ (೭ನೇ ಡಾನ್, ಕೇರಳ)
೩.ಪ್ರದೀಪ್ ಜನಾರ್ಧನ್  (೬ನೇ ಡಾನ್, ಕರ್ನಾಟಕ)
ಕಿಟ್ ವಿತರಣಾ ಸಮಾರಂಭ 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಟೆಕ್ವಾಂಡೋ ಪಟುಗಳಿಗೆ ಭಾನುವಾರ ಕಿಟ್ ವಿತರಣಾ ಸಮಾರಂಭ  ನಡೆಯಲಿದೆ. ಬ್ಯಾಟರಾಯನಪುರದ ಕಾರ್ಪೊರೇಟರ್ ಪಿ.ವಿ. ಮಂಜುನಾಥ ಬಾಬು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಅತಿಥಿಗಳಾಗಿ ಬ್ಯಾಟರಾಯನಪುರ ಯೂತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಗೌರೀಶ್ ಕೆ. ಹಾಗೂ ಆರ್ಟಿಜೆನ್ ಇಂಟೀರಿಯರ್ಸ್ ಪ್ರೈ. ಲಿ. ಮತ್ತು ಡಿ ಆಂಡ್ ಎಂ. ಬಿಲ್ಡಿಂಗ್ ಪ್ರೊಡಕ್ಟ್ಸ್ ಪ್ರೈ. ಲಿ.ನ ಮಾಲೀಕರು ಆಗಮಿಸಲಿದ್ದಾರೆ.

Related Articles