Sunday, September 8, 2024

ಬದುಕಿನ ಇನ್ನಿಂಗ್ಸ್ ಮುಗಿಸಿದ ವಾಡೇಕರ್

ಸ್ಪೋರ್ಟ್ಸ್ ಮೇಲ್ ವರದಿ

ಭಾರತ ಕ್ರಿಕೆಟ್ ತಂಡದ  ಮಾಜಿ ನಾಯಕ ಅಜಿತ್ ವಾಡೇಕರ್ ಬುಧವಾರ ರಾತ್ರಿ ಮುಂಬೈಯಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಬಹಳ ವರ್ಷದಿಂದ ವಾಡೇಕರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.  1970 ರಲ್ಲಿ ಏಂಗಲ್ನ್ಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯೆಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಜಯ ತಂದು ಕೊಡುವ ಮೂಲಕ ವಾಡೇಕರ್ ಭಾರತ ಕ್ರಿಕೆಟ್ ನಲ್ಲಿ ಸದಾ ಸ್ಮರಣೀಯರೆನಿಸಿದ್ದಾರೆ.

 

ವಾಡೇಕರ್ ಅವರ ನಾಯಕತ್ವದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ನಲ್ಲಿ ಐದು ಪಂದ್ಯಗಳನ್ನು ಗೆದ್ದಿತ್ತು. ಅದೇ ರೀತಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ  ಸರಣಿಯಲ್ಲೂ ಜಯ ಗಳಿಸಿತ್ತು. ತಂಡ ಕಳಪೆ ಪ್ರದರ್ಶನ ತೋರಿದ ಹಿನ್ನಲೆಯಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದರು. ನಿವೃತ್ತಿಯ ನಂತರ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿಯೂ ವಾಡೇಕರ್ ಸೇವೆ  ಸಲ್ಲಿಸಿದ್ದರು. ಟೆಸ್ಟ್ ಆಟಗಾರ, ಕ್ಯಾಪ್ಟನ್, ಮ್ಯಾನೇಜರ್, ಕೋಚ್ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ಹೀಗೆ ಕ್ರಿಕೆಟ್ ನ ಹಲವು ಜವಾಬ್ಧಾರಿಯುತ ಸ್ಥಾನದಲ್ಲಿ ದುಡಿದ ಅಪೂರ್ವ ವ್ಯಕ್ತಿ ವಾಡೇಕರ್.

Related Articles