Friday, October 4, 2024

ದ್ರಾವಿಡ್ ಕೋಚ್ ಆಗಲು ಸೂಕ್ತ ಕಾಲ

ಸ್ಪೋರ್ಟ್ಸ್ ಮೇಲ್ ವರದಿ

ವಿದೇಶದ ನೆಲದಲ್ಲಿ ಭಾರತ ಕ್ರಿಕೆಟ್ ತಂಡ ಹೀನಾಯದ ಪ್ರದರ್ಶನ ತೋರುತ್ತಿರುವ ಹಿನ್ನೆಲೆಯಲ್ಲಿ ತಂಡದ ಕೋಚ್ ರವಿಶಾಸ್ತ್ರಿ ಅವರನ್ನು ಕೈ ಬಿಡಬೇಕು ಎಂಬ ಧ್ವನಿ ಎದ್ದಿದೆ.

ಇದು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದ ಧ್ವನಿ. ಆದರೆ ಇದು ಸತ್ಯದ ಧ್ವನಿ ಕೂಡ. ಅವರ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಪ್ರಧಾನ ಕೋಚ್ ಆಗಿ ಆಯ್ಕೆ ಮಾಡಬೇಕು ಎಂದು ಹೇಳಲಾಗುತ್ತಿದೆ.

ಶಾಸ್ತ್ರಿ ಯ ಕೆಲಸ ಏನು?
ಸತ್ಯ ಹೇಳಬೇಕೆಂದರೆ ಏನೂ ಇಲ್ಲ. ಪಂದ್ಯಕ್ಕೆ ಮೊದಲು ನೆಟ್ ನಲ್ಲಿ ಚೆಂಡನ್ನು ಎಸೆಯೋದು, ಮನಸ್ಸಿದ್ದರೆ ಕ್ಯಾಚ್ ಅಭ್ಯಾಸ ಮಾಡಿದರೆ ಒಂದಿಷ್ಟು ಕೋಟಿ ಕ್ಯಾಶ್ ಖಾತೆಯೆ ಜಮಾ ಆಗುತ್ತದೆ.
ಅವರ ಡೊಳ್ಳು ಹೊಟ್ಟೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸಾಕಷ್ಟು ಟೀಕೆ ಕೇಳಿ ಬಂದಿತ್ತು.

ರಾಹುಲ್ ದ್ರಾವಿಡ್ ಸೂಕ್ತ

ದ್ರಾವಿಡ್ ಈಗ U19 ತಂಡಕ್ಕೆ  ತರಬೇತುದಾಋಆಗಿದ್ದಾರೆ. ಯಾವ ಆಟಗಾರರಲ್ಲಿ ಯಾವ ಪ್ರತಿಭೆ ಇದೆ ಎಂಬುದು ಚೆನ್ನಾಗಿ ಗೊತ್ತು. ಪ್ರತಿಭಾವಂತರಿಗೆ ಮೋಸ ಆಗದಂತೆ ನೋಡಿಕೊಳ್ಳುತ್ತಾರೆ. ನಾಯನಿಗೆ ಜವಾಬ್ದಾರಿಯ ಬಗ್ಗೆ ತಿಳಿಸುತ್ತಾರೆಯೇ ವಿನಃ ತನ್ನ ಸ್ಥಾನದ ಉಳಿವಿಗಾಗಿ ನಾಯಕ ಹೇಳಿದಂತೆ ಕೇಳುವವರಲ್ಲ.

ಕುಳಿತುಕೊಂಡಿದ್ದಕ್ಕೇ 8 ಕೋಟಿ

ರವಿಶಾಸ್ತಿ ಜಗತ್ತಿನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್ ಕೋಚ್. ಆಡುವವರಿಗೂ ಇಷ್ಟು ಸಿಗೊಲ್ಲ. ಲಾರ್ಡ್ಸ್ ಅಂಗಣದಲ್ಲಿ ಯಾವ ಬೌಲರ್ ಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅರಿಯದ ಕೋಚ್ ಇನ್ನು ಜಯದ ಬಗ್ಗೆ ಹೇಗೆ ಯೋಚಿಸಬಹುದು?. ವಿರಾಟ್ ಕೊಹ್ಲಿಗೆ ಬಕೆಟ್ ಹಿಡಿಯುತ್ತ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಶಾಸ್ತ್ರಿಗೆ ಗೇಟ್ ಪಾಸ್ ನೀಡಿ ಅವರ ಸ್ಥಾನದಲ್ಲಿ ದ್ರಾವಿಡ್ ಗೆ ಅವಕಾಶ ಕೊಡಲು ಇದು ಸೂಕ್ತ ಕಾಲ.

ದ್ರಾವಿಡ್ ಗೆ ಹಿರಿಯರ ತಂಡದ ಕೋಚ್ ಆಗುವಂತೆ ಆಫರ್ ಬಂದಿತ್ತು. ಆದರೆ ಸದ್ಯ ಕಿರಿಯರ ತಂಡವೇ ಸಾಕೆಂದು ಅವರು ಅವಕಾಶವನ್ನು ತಳ್ಳಿ ಹಾಕಿದ್ದರು

Related Articles