ಏಷ್ಯನ್ ಗೇಮ್ಸ್ ಗೆ ಶುಭ ಹಾರೈಕೆ

0
304
ಸ್ಪೋರ್ಟ್ಸ್ ಮೇಲ್ ವರದಿ:

 

ಇದೇ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಕೇರಳದ ಇತಿಹಾಸ ಉಪನ್ಯಾಸಕರೊಬ್ಬರು ಬ್ರೌಷರ್ ಮೂಲಕ ಶುಭ ಹಾರೈಸಿದ್ದಾರೆ.

ಕೊಚ್ಚಿಯ ಮಲ್ಬಾರ್ ಕ್ರಿಶ್ಚಿಯನ್ ಕಾಲೇಜು ನಲ್ಲಿ ಇತಿಹಾಸ ಉಪನ್ಯಾಸಕ್ರಗಿರುವ ಪ್ರೊ. ವಶಿಷ್ಟ್ ತಮ್ಮ ವಿದ್ಯಾರ್ಥಿನಿ ಆರತಿ ನಾಯರ್ ಅವರೊಂದಿಗೆ ಕ್ರೀಡೆಗೆ ಪ್ರೋತ್ಸಹ ನೀಡುವ ಈ ಕೆಲಸವನ್ನು ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಲೈಬ್ರೆರಿ ನಿರ್ಮಿಸುವ ಮೂಲಕ
ದೇಶದೆಲ್ಲಡೆ ಸುದ್ದಿಯಾಗಿದ್ದ ವಶಿಷ್ಟ, ಜಾಗತಿಕ ಮಟ್ಟದ ಪ್ರತಿಯೊಂದು ಕ್ರೀಡಾಕೂಟಕ್ಕೂ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ. ಕೇರಳದ ಶಾಲೆಗಳಲ್ಲಿ ಏಷ್ಯನ್  ಗೇಮ್ಸ್ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುವ ಕೆಲಸ ಮಾಡುತ್ತಿದ್ದಾರೆ. ಏಷ್ಯಾದ ಶಾಂತಿಗಾಗಿ ಏಷ್ಯನ್ ಗೇಮ್ಸ್ ಎಂಬ ಸಂದೇಶವನ್ನು ಸಾರಿದ್ದಾರೆ.