ರಸ್ತೆ ಅಪಘಾತಕ್ಕೆ ಚಾಂಪಿಯನ್ ಬಲಿ

0
554
ನಂದಿ (ಕೀನ್ಯಾ):

೨೦೧೫ರ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕೀನ್ಯಾದ ನಿಕೋಲಾಸ್ ಬೆಟ್ ರಸ್ತೆ ಅಪಘಾತದಲ್ಲಿ ದುರಂತ ಸಾವನುಭವಿಸಿದ್ದಾರೆ.

ಅವರಿಗೆ ಕೇವಲ 28 ವಯಸ್ಸಾಗಿತ್ತ್ತು. ಎರಡು ದಿನಗಳ ಹಿಂದೆ ನಡೆದ ಕಾಂಟಿನೆಂಟಲ್ ಚಾಂಪಿಯನ್ಷಿಪ್ ನಲ್ಲಿ ಭಾಗವಹಿಸಿ ಬೆಟ್ ಮನೆಗೆ ಹಿಂದಿರುಗುತ್ತಿದ್ದರು.
ಎಲ್ಡರೆಸ್ಟ್ ಹಾಗೂ ಕಾಪಿಸಬೆಟ್ ನಡುವೆ ಪ್ರಯಾಣಿಸುತ್ತಿರುವಾಗ ಬೆಟ್ ಚಲಾಯಿಸುತ್ತಿದ್ದ ಟೊಯೋಟಾ ಪ್ರಾಡೋ ಎಸ್ ಯು ವಿ ರಸ್ತೆಯ ಉಬ್ಬಿಗೆ ಬಡಿದು ಉರುಳಿದ ಬೆಟ್ ಸ್ಥಳದಲ್ಲೇ ಸಾವನ್ನಪ್ಪಿದರು. 2005 ರಲ್ಲಿ ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಬೆಟ್ ಚಿನ್ನ ಗೆಲ್ಲುವ ಮೂಲಕ ಕೀನ್ಯಾದ ಹೀರೊ ಎನಿಸಿದ್ದರು. ಹರ್ಡಲ್ಸ್ ನಲ್ಲಿ ಎರಡು ಬಾರಿ ಆಫ್ರಿಕನ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದರು.