Friday, December 13, 2024

ನೋವಾಕ್ ಅಮೆರಿಕ ಚಾಂಪಿಯನ್

ಏಜೆನ್ಸೀಸ್ ನ್ಯೂಯಾರ್ಕ್

ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ 6-3,7-6 (4),6-3 ಅಂತರದಲ್ಲಿ ಜಯ ಗಳಿಸಿದ ಸರ್ಬಿಯಾದ ನೊವಾಕ್ ಜೊಕೋವಿಕ್  ಮೂರನೇ ಬಾರಿಗೆ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಗೆದ್ದಿದ್ದಾರೆ.

ಯುಎಸ್ ಓಪನ್‌ನಲ್ಲಿ ೫ ಬಾರಿ ಫೈನಲ್ ತಲುಪಿರುವ ಜೊಕೋವಿಕ್ ಮೂರು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು. 14 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಜೊಕೋವಿಕ್ ಅಮೆರಿಕದ ಪೀಟ್ ಸ್ಯಾಂಪ್ರಸ್ ದಾಖಲೆಯನ್ನು ಸರಿಗಟ್ಟಿದರು. ಮುಂದಿನ ವರ್ಷದ ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಜೊಕೋವಿಕ್ ಜಯ ಗಳಿಸಿದರೆ, ರೋಜರ್ ೆಡರರ್ (20), ರೊಲ್ ನಡಾಲ್ (17) ಅವರೊಂದಿಗೆ ಅತಿ ಹೆಚ್ಚು ಪ್ರಶಸ್ತಿ ಗೆದ್ದವರ ಸಾಲಿನಲ್ಲಿ ಮೂರನೇ ಸ್ಥಾನ ಗಳಿಸಲಿದ್ದಾರೆ. ಕಳೆದ 9 ವರ್ಷಗಳಲ್ಲಿ ಡೆಲ್‌ಪೊಟ್ರೋ ಮೊದಲ ಗ್ರ್ಯಾನ್ ಸ್ಲಾಮ್ ಫೈನಲ್ ಪಂದ್ಯವನ್ನಾಡಿದರು. ೨೦೦೯ರ ಸೆಮಿೈನಲ್‌ನಲ್ಲಿ ನಡಾಲ್ ಅವರನ್ನು ಸೋಲಿಸಿದ್ದ ಡೆಲ್ ಪೊಟ್ರೊ ನಂತರ ಫೈನಲ್‌ನಲ್ಲಿ ಫೆಡರರ್‌ಗೆ ಸೋಲುಣಿಸಿ ಪ್ರಶಸ್ತಿ ಗೆದ್ದಿದ್ದರು. ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ  ನೆರೆದ ಪ್ರೇಕ್ಷಕರಲ್ಲಿ ಹೆಚ್ಚಿನವರು ಡೆಲ್ ಪೊಟ್ರೋ ಅವರಿಗೆ ಬೆಂಬಲ ಸೂಚಿಸುತ್ತಿರುವುದು ಕಂಡು ಬಂದು. ಆದರೆ ಜೊಕೋವಿಕ್ ನೈಜ ಆಟ ಪ್ರದರ್ಶಿಸಿ ಅರ್ಜೆಂಟೀನಾದ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಿದರು.

Related Articles