ಸ್ಪೋರ್ಟ್ಸ್ ಮೇಲ್ ವರದಿ
ಭಾರತೀಯ ಕ್ರೀಡಾ ಪತ್ರಕರ್ತರ ಫೆಡರೇಷನ್ ಹಾಗೂ ಬೆಂಗಳೂರು ಕ್ರೀಡಾ ಬರಹಗಾರರ ಸಂಘಟನೆ (ಸ್ವಾಬ್) ಜಂಟಿಯಾಗಿ ಆಯೋಜಿಸಿದ ಕ್ರೀಡಾ ಚರ್ಚೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್, ವೆಂಕಟಪತಿ ರಾಜು ಹಾಗೂ ಸ್ಟುವರ್ಟ್ ಬಿನ್ನಿ ಪಾಲ್ಗೊಂಡರು.
ಇದೇ ವೇಳೆ ಕರ್ನಾಟಕದ ಕ್ರೀಡೆಗೆ ತಮ್ಮ ಬರವಣಿಗೆ ಹಾಗೂ ಛಾಯಾಚಿತ್ರಗಳ ಮೂಲಕ ಶ್ರೇಷ್ಠ ಕೊಡುಗೆ ನೀಡಿದ ಹಿರಿಯರನ್ನು ಸನ್ಮಾನಿಸಲಾಯಿತು. ದಿ ಹಿಂದೂ ಪತ್ರಿಕೆಯ ಮಾಜಿ ಮುಖ್ಯ ಛಾಯಾಗ್ರಾಹಕ ಕೆ. ಗೋಪಿನಾಥನ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಾಜಿ ಮುಖ್ಯ ಛಾಯಾಗ್ರಾಹಕ ಸ್ಯಾಮ್ಸನ್ ವಿಕ್ಟರ್, ಖ್ಯಾತ ಕ್ರಿಕೆಟ್ ಬರಹಗಾರ ಸುರೇಶ್ ಮೆನನ್, ಪ್ರಜಾವಾಣಿಯ ಮಾಜಿ ಕ್ರೀಡಾ ಸಂಪಾದಕ ಎಸ್. ದೇವನಾಥ್, ದಿ ಹಿಂದೂ ಪತ್ರಿಕೆಯ ಮಾಜಿ ಕ್ರೀಡಾ ಮುಖ್ಯಸ್ಥ ಕಲ್ಯಾಣ್ ಅಶೋಕ್, ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿಯ ನಿರ್ದೇಶಕ ಕೆ.ಎಸ್. ಶಾಂತಕುಮಾರ್ ಅವರನ್ನು ಗೌರವಿಸಲಾಯಿತು.