Saturday, July 27, 2024

ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್‌ಐಆರ್‌ ದಾಖಲು, ಪ್ರಧಾನಿಗೆ ದೂರು

ಕ್ರಿಕೆಟ್‌ ಜಗತ್ತಿನ ಪ್ರತಿಷ್ಠಿತ ವಿಶ್ವಕಪ್‌ ಟ್ರೋಫಿಯ ಮೇಲಿ ಕಾಲಿಟ್ಟು ಅವಮಾನ ಮಾಡಿ ಕ್ರಿಕೆಟ್‌ ಅಭಿಮಾನಿಗಳ  ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿದ್ದಾರೆಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಆಸ್ಟ್ರೇಲಿಯಾದ ಆಟಗಾರ ಮಿಚೆಲ್‌ ಮಾರ್ಷ್‌ ವಿರುದ್ಧ ಡೆಲ್ಲಿ ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. FIR filled against Australian allrounder Mitchell Marsh for placing his feet on World Cup Trophy.

ದೂರು ದಾಖಲಿಸಿದ ಬಳಿಕ ಆ ವ್ಯಕ್ತಿ, ಮಿಚೆಲ್‌ ಮಾರ್ಷ್‌ಗೆ ಇನ್ನು ಮುಂದೆ ಭಾರತದಲ್ಲಿ ಆಡಲು ಬಿಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಭಾರತದ ವಿರುದ್ಧ ಜಯ ಗಳಿಸಿ ವಿಶ್ವಕಪ್‌ ಗೆದ್ದ ನಂತರ ಸಂಭ್ರಮಾಚರಣೆ ಮಾಡುವಾಗ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌ ಕೈಯಲ್ಲಿ ಪಿಂಟ್‌ ಹಿಡಿದು, ಕಾಲನ್ನು ಟ್ರೋಫಿಯ ಮೇಲಿಟ್ಟಿದ್ದರು. ಈ ಫೋಟೋವನ್ನು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌‌ ಅವರು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದು ಕ್ರಿಕೆಟ್‌ ಜಗತ್ತಿನ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ಅನೇಕರ ಮನಸ್ಸಿಗೂ ನೋವಾಗಿದೆ ಎಂದು ವರದಿಗಳು ಹೇಳುತ್ತಿವೆ.

ಇದು ವಿಶ್ವದ ಕ್ರಿಕೆಟ್‌ ಅಭಿಮಾನಿಗಳು ಮಾತ್ರವಲ್ಲ ಭಾರತದ ಕ್ರಿಕೆಟ್‌ ಅಭಿಮಾನಿಗಳ ಮನಸ್ಸನ್ನು ನೋಯಿಸಿದೆ ಎಂದು ಪಂಡಿತ್‌ ಕೇಶವ್‌ ಎನ್ನುವವರು ದೂರು ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಪೊಲೀಸರು ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಪಂಡಿತ್‌ ಕೇಶವ್‌ ದೂರಿನ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರಿಗೂ ರವಾನಿಸಿದ್ದು ಇನ್ನುಮುಂದೆ ಆಸ್ಟ್ರೇಲಿಯಾ ಆಲ್ರೌಂಡರ್‌ಗೆ ಭಾರತದಲ್ಲಿ ಆಡಲು ಅವಕಾಶ ನೀಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

Related Articles