ಜಗನ್, ಶ್ರುತಿಗೆ ಚಾಂಪಿಯನ್ ಪಟ್ಟ
ಸ್ಪೋರ್ಟ್ಸ್ ಮೇಲ್ ವರದಿ
ಹಾಲಿ ಚಾಂಪಿಯನ್ ಜಗನ್ ಕುಮಾರ್ ಋತುವಿನ ಮೊದಲ ಚಾಂಪಿಯನ್ ಪಟ್ಟ ಗೆಲ್ಲುವುದರೊಂದಿಗೆ ಚೆನ್ನೈನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎ್‌ಎಂಎಫ್ ಸಿಐ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನಲಿಲ ಟಿವಿಎಸ್ ತಂಡ ಮೊದಲ ಹಾಗೂ ಎರಡನೇ ಸ್ಥಾನ ತನ್ನದಾಗಿಸಿಕೊಂಡಿದೆ.
ಟಿವಿಎಸ್ ತಂಡ ಅಗ್ರ ಸ್ಥಾನವನ್ನು ಪಡೆದರೆ, ಎದುರಾಳಿ ಇಡಿಮಿಸ್ತು ಹೊಂಡಾ ಟೆನ್‌೧೦ ರೇಸಿಂಗ್ ಮೂರನೇ ಸ್ಥಾನ ಗಳಿಸಿತು. ಮಥನ ಕುಮಾರ್ ಹಿನ್ನಡೆ ಅನುಭವಿಸಿದರೆ, ಶರತ್ ಕುಮಾರ್ ರೇಸ್ ಆರಂಭಗೊಂಡು ೫೦ ಮೀಟರ್ ಸಾಗುತ್ತಿದ್ದಂತೆ ಗೇರ್ ಲಿವರ್ ಮುರಿದ ಕಾರಣ ಹಿನ್ನಡೆ ಅನು‘ವಿಸಿದರು. ಚಾಂಪಿಯನ್‌ಷಿಪ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ರಾಜೀವ್ ಸೇತು ಮೊದಲ ಲ್ಯಾಪ್‌ನಲ್ಲೇ ವೈಫಲ್ಯ ಕಂಡರು. ಆದರೆ ಮಿಥುನ್ ಕುಮಾರ್ ಯಶಸ್ಸು ಕಂಡಿರುವುದು ಹೊಂಡಾ ಪಾಳಯದಲ್ಲಿ ಸಂಭ್ರಮ ಉಂಟು ಮಾಡಿದೆ.
ವನಿತೆಯರ ೧೬೫ಸಿಸಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಪೆಕ್ಸ್ ರೇಸಿಂಗ್ ಅಕಾಡೆಮಿಯ ಶ್ರತಿ ನಾಗರಾಜನ್ ಮೊದಲ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು. ಅಲಿಶಾ ಅಬ್ದುಲ್ಲಾ ತಂಡದ ಪ್ರಭು ಅರುಣಗಿರಿ ಉತ್ತಮ ಪೈಪೋಟಿಯೊಂದಿಗೆ ಮೇಲುಗೈ ಸಾಧಿಸಿದರು. ಅಗ್ರ ಸ್ಥಾನ ಗಳಿಸಿದ ಜಗನ್ ೮೭ ಅಂಕಗಳನ್ನು ತಮ್ಮದಾಗಿಸಿಕೊಂಡರು. ಅಹಮ್ಮದ್ ೭೬ ಹಾಗೂ ರಾಜೀವ್ ಸೇಥು ೭೦ ಅಂಕಗಳನ್ನು ಗಳಿಸಿದರು.