Thursday, December 5, 2024

ಮಿಚೆಲ್‌ ಮಾರ್ಷ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿಲ್ಲ: ಸ್ಪಷ್ಟನೆ

ಹೊಸದಿಲ್ಲಿ: ವಿಶ್ವಕಪ್‌ ಟ್ರೋಫಿಯ ಮೇಲೆ ಕಾಲಿಟ್ಟಿದ್ದಕ್ಕೆ ಆಸ್ಟ್ರೇಲಿಯಾ ಆಲ್ರೌಂಡರ್‌ ಮಿಚೆಲ್‌ ಮಾರ್ಷ್‌ ವಿರುದ್ಧ FIR ದಾಖಲಾಗಿಲ್ಲ ಎಂದು ಅಲಿಘಡದ ಡೆಲ್ಲಿ ಗೇಟ್‌ ಪೊಲೀಸ್‌ ವಿಭಾಗದ ಎಸ್‌ಎಸ್‌ಪಿ ಕಲಾನಿಧಿ ನೈತಾನಿ ಅವರು ಸ್ಪಷ್ಟಪಡಿಸಿದ್ದಾರೆ. There is no FIR registered against Michell Marsh police clarifies.

ಮಿಚೆಲ್‌ ಮಾರ್ಷ್‌ ವಿರುದ್ಧ ದೂರು ದಾಖಲಾಗಿದ್ದು, ನರೇಂದ್ರ ಮೋದಿಯವರಿಗೂ ಪ್ರತಿಯನ್ನು ಕಳುಹಿಸಲಾಗಿದೆ ಎಂದು ಶುಕ್ರವಾರ ಮಧ್ಯಾಹ್ನ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳು ತಮ್ಮ ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದವು. ಪಂಡಿತ್‌ ಕೇಶವ್‌ ದೇವ್‌ ಎನ್ನುವ ವ್ಯಕ್ತಿ ಭ್ರಷ್ಟಾಚಾರ ವಿರೋಧಿ ಸೇನಾ ಎಂಬ ಸಂಘಟನೆಯ ಅಧ್ಯಕ್ಷನಾಗಿದ್ದು, ಅಲಿಘಡ್‌ ಪೊಲೀಸ್‌ ನಿಲ್ದಾಣಕ್ಕೆ ದೂರೊಂದನ್ನು ಕಳುಹಿಸಿದ್ದು ನಿಜ, ಆದರೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Related Articles