Friday, February 23, 2024

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಕರ್ನಾಟಕದ ನಾಲ್ವರು ಆಯ್ಕೆ

ಬೆಂಗಳೂರು: ಮುಂಬರುವ ಟಿ20 ಸರಣಿಯಲ್ಲಿ ಭಾರತ ಮಹಿಳಾ ಎ ತಂಡವು ಇಂಗ್ಲೆಂಡ್‌ ಎ ತಂಡದ ವಿರುದ್ಧ ಆಡಲಿದ್ದು, ಈ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರ್ತಿಯರು ಆಯ್ಕೆಯಾಗಿದ್ದಾರೆ. Four players from Karnataka selected for India A T20 series against England A

ಶ್ರೇಯಾಂಕ ಪಾಟೀಲ್‌, ಗ್ನಾನಾನಂದ ದಿವ್ಯ, ವೃಂದಾ ದಿನೇಶ್‌ ಮತ್ತು  ಮೊನಿಕಾ ಟಪೇಲ್‌ 16 ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ನಾಲ್ವರೂ ಆಟಗಾರ್ತಿಯರು ರಾಜ್ಯದ ಪರ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ತಂಡದಲ್ಲಿ ಅವಕಾಶ ಪಡೆದಿರುತ್ತಾರೆ.

ಕೇರಳದ ಮಿನ್ನು ಮಾನಿ ತಂಡದ ನಾಯಕತ್ವ ವಹಿಸಿದ್ದು, ಅಸ್ಸೋಂನ ಉಮಾ ಚೆಟ್ಟಿ ವಿಕೆಟ್‌ ಕೀಪರ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಪಂದ್ಯಗಳು ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನವೆಂಬರ್‌ 29 ರಂದು 1:30ಕ್ಕೆ ಮೊದಲ ಪಂದ್ಯವಿರುತ್ತದೆ.ಡಿಸೆಂಬರ್‌ 1 ರಂದು ವಾಂಖೆಡೆಯಲ್ಲಿ ಮಧ್ಯಾಹ್ನ 1:30ಕ್ಕೆ ಎರಡನೇ ಪಂದ್ಯ ಹಾಗೂ ಡಿಸೆಂಬರ್‌ 3ರ ಮಧ್ಯಾಹ್ನ 1:30ಕ್ಕೆ ಮೂರನೇ ಪಂದ್ಯವಿರುತ್ತದೆ.

ತಂಡದ ವಿವರ: ವಿನ್ನು ಮಾನಿ (ನಾಯಕಿ), ಅಂಕಿತ ಅಹುಜಾ, ಉಮಾ ಚೆಟ್ಟಿ, ಶ್ರೇಯಾಂಕ ಪಾಟೀಲ್‌, ಟಿ. ತ್ರಿಶಾ, ವೃಂದಾ ದಿನೇಶ್‌, ಗ್ನಾನಾನಂದ ದಿವ್ಯಾ, ಅರಶಿ ಗೋಯೆಲ್‌, ದಿಶಾ ಕಸತ್‌, ರಾಶಿ ಕನೋಜಿಯಾ, ಮನ್ನತ್‌ ಕಶ್ಯಪ್‌, ಅನುಶಾ ಬರೆಡ್ಡಿ, ಮೊನಿಕಾ ಪಟೇಲ್‌, ಕಶವೀ ಗೌತಮ್‌, ಜಿಂತಿಮನಿ ಕಲಿತಾ, ಪ್ರಕಾಶಿಕ ನಾಯ್ಕ್‌.

Related Articles