Tuesday, November 12, 2024

ಮಾನನಷ್ಟ ಪ್ರಕರಣ: ಗೇಲ್‌ಗೆ ಗೆಲುವು

ಸಿಡ್ನಿ:

 ಮಾನನಷ್ಟ ಪ್ರಕರಣ ಸಂಬಂಧ ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ ಅವರಿಗೆ ಫೈರ್‌ಫಾಕ್ಸ್‌ ಮಾಧ್ಯಮ ಸಂಸ್ಥೆ 1.14 ಕೋಟಿ ರೂ. ಪರಿಹಾರ ನೀಡುವಂತೆ ಆಸ್ಟ್ರೇಲಿಯಾ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.

2015ರ ಐಸಿಸಿ ವಿಶ್ವಕಪ್‌ ವೇಳೆ ಕ್ರಿಸ್‌ ಗೇಲ್‌, ಮಹಿಳಾ ಮಸಾಜ್‌ ಥೆರಪಿಸ್ಟ್‌ರೊಂದಿಗೆ ಅನುಚಿತ ವರ್ತನೆ ತೋರಿದ್ದಾರೆಂಬ ಆರೋಪವನ್ನು ಫೈರ್‌ಫಾಕ್ಸ್‌ ಸಂಸ್ಥೆ ತನ್ನ ಸುದ್ದಿಪತ್ರಿಕೆಗಳಲ್ಲಿ ಹಾಗೂ ಆನ್‌ಲೈನ್‌ ಜಾಲದಲ್ಲಿ 2016 ರಲ್ಲಿ ಪ್ರಕಟಿಸಿತ್ತು. ಹಾಗಾಗಿ, ಗೇಲ್‌ ಫೈರ್‌ಫಾಕ್ಸ್‌ ಸಂಸ್ಥೆಯ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ನೀಡಿದ್ದರು.
2017 ರಲ್ಲಿ ನಡೆದಿದ್ದ ವಿಚಾರಣೆಯಲ್ಲಿ ಗೇಲ್‌ ವಿರುದ್ಧ ಪ್ರಕಟವಾಗಿರುವ ಆರೋಪದ ಸುದ್ದಿಯಲ್ಲಿನ ಸತ್ಯ ಸಾಭೀತು ಮಾಡುವಲ್ಲಿ ಫೈರ್‌ಪಾಕ್ಸ್‌ ಮಾಧ್ಯಮ ವಿಫಲವಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯೂ ಸೌಥ್‌ ವೇಲ್ಸ್‌ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಲುಕಿ ಮೆಕ್‌ಕಲಮ್‌ ಅವರು, ಈ ಪ್ರಕರಣದಿಂದ ಕ್ರಿಕೆಟ್‌ ವಲಯದಲ್ಲಿ ಅಭಿಮಾನಿಗಳು, ತರಬೇತುದಾರರು ಹಾಗೂ ಆಡಳಿತ ವರ್ಗ ಮತ್ತು ಆಟಗಾರರ ಮಧ್ಯೆ ಕ್ರಿಸ್‌ ಗೇಲ್‌ಗೆ ಮುಜುಗಾರವಾಗಿದೆ. ಹಾಗಾಗಿ, ಅವರಿಗೆ ಪರಿಹಾರವಾಗಿ 220 ಸಾವಿರ ಡಾಲರ್‌ ಪರಿಹಾರ ನೀಡುವಂತೆ ಫೈರ್‌ಫಾಕ್ಸ್ ಸಂಸ್ಥೆಗೆ ಸೂಚಿಸಿ, ತೀರ್ಪು ನೀಡಿದರು.

Related Articles