ಅಗ್ರ ಸ್ಥಾನಕ್ಕೆ ಮರಳಿದ ಜೊಕೊವಿಕ್

0
209

ಪ್ಯಾರಿಸ್:

ಪ್ಯಾರಿಸ್ ಓಪನ್ ರನ್ನರ್ ಅಪ್ ಆಗುವ ಮೂಲಕ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಕ್  ಎರಡು ವರ್ಷಗಳ ಬಳಿಕ ಎಟಿಪಿ ರಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ.

ಪ್ರೆಂಚ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಸೋತು 22ನೇ ಸ್ಥಾನದಲ್ಲಿದ್ದ ಜೊಕೊವಿಕ್ , ಕಳೆದ ಐದು ತಿಂಗಳಿನಿಂದ ರಾಂಕಿಂಗ್ ನಲ್ಲಿ ಏರಿಕೆ ಕಂಡಿದ್ದರು. ಇದೀಗ 8045 ಅಂಕಗಳೊಂದಿಗೆ ಎಟಿಪಿ ರಾಂಕಿಂಗ್ ನಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. 7480 ಅಂಕಗಳೊಂದಿಗೆ ರಾಫೆಲ್ ಮಡಾಲ್ ಎರಡನೇ ಸ್ಥಾನ ಹಾಗೂ 6020 ಅಂಕಗಳೊಂದಿಗೆ ರೋಜರ್ ಫೆಡರರ್ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಪ್ಯಾರಿಸ್ ಮಾಸ್ಟರ್ಸ್ ಚಾಂಪಿಯನ್ ಕರೆನ್ ಖಾಚ್ನೊವ್ 11 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.