ಎಟಿಪಿ ಟೂರ್ನಿಯಿಂದಲೂ ನಡಾಲ್ ಔಟ್

0
175
ಲಂಡನ್:

ಮುಂದಿನ ವಾರ ನಡೆಯಲಿರುವ ಎಟಿಪಿ ಟೂರ್ ಫೈನಲ್ ನಿಂದ ರಾಫೆಲ್ ನಡಾಲ್ ದೂರ ಸರಿದಿದ್ದಾರೆ.

ಪ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಅವರು ಕಿಬ್ಬೊಟ್ಟೆಯ ಸ್ನಾಯುವಿನ ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಪ್ಯಾರಿಸ್ ಮಾಸ್ಟರ್ಸ್ ಓಪನ್ ಆರಂಭಕ್ಕೂ ಮುನ್ನವೇ ಕಾಣಿಸಿಕೊಂಡಿತ್ತು. ಹಾಗಾಗಿ ಅವರು ಆ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ಕಳೆದ ವಾರ ಅವರ ಪಾದದ ಶಸ್ತ್ರ ಚಿಕಿತ್ಸೆ ನಡೆದಿದ್ದು ವರ್ಷದ ಕೊನೆಯ ಟೂರ್ನಿಗೆ ವಂಚಿತರಾಗುತ್ತಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೂಲಕ ತಿಳಿಸಿರುವ ನಡಾಲ್, ಮುಂದಿನ ಆವೃತ್ತಿಯಿಂದ ಲಭ್ಯವಿರುವುದಾಗಿ ಹೇಳಿದ್ದಾರೆ.