ದಿವ್ಯಾಂಶ್ ಗೆ ಬೆಳ್ಳಿ, ಇಲವೆನಿಲ್ ಗೆ ಕಂಚು

0
204
ಕುವೈತ್ ಸಿಟಿ:

ಭಾರತದ ಕಿರಿಯ ಶೂಟರ್ ದಿವ್ಯಾಂಶ್ ಸಿಂಗ್ ಪನ್ವಾರ್ ಹಾಗೂ ಇಲವೆನಿಲ್ ವಲರಿವನ್ ಅವರು ಇಲ್ಲಿ ನಡೆಯುತ್ತಿರುವ 11ನೇ ಏಷ್ಯನ್ ಶೂಟಿಂಗ್ ಚಾಂಪಯನ್ ಶಿಪ್ ನ ಏರ್ ರೈಫಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಪುರುಷರ 10 ಮೀ ಏರ್ ರೈಫಲ್ ಫೈನಲ್ ನಲ್ಲಿ ದಿವ್ಯಾಂಶ್ ಅವರು 251.4 ಅಂಕಗಳ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾದರು. ಚೀನಾದ ವಾಂಗ್ ಯುಫೆಂಗ್ ಅವರು 252.3 ಕಿರಿಯರ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
 ಕಿರಿಯ ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತದ ಇಲವೆನಿಲ್ ಅವರು 227.9 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತರಾದರು. ಚೀನಾದ ಸ್ಪರ್ಧಿ ಶಿ ಮೆಂಗ್ಯೂ ಅವರು 250/3 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು ಹಾಗೂ 249.3 ಅಂಕಗಳಿಸಿದ ಕ್ಸು ಹಾಂಗ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.