Thursday, September 21, 2023

ವಿಶ್ವ ಕಪ್ ವಾಲ್ಟ್ ಗೆ ಅರ್ಹತೆ ಪಡೆದ ದೀಪಾ ಕರ್ಮಾಕರ್

ದೆಹಲಿ:

ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಜರ್ಮನಿಯ ಕಾಟ್‌ಬಸ್‌ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವಿಶ್ವಕಪ್‌ನ ವಾಲ್ಟ್  ಫೈನಲ್‌ಗೆ ಅರ್ಹತೆ ಪಡೆದರು.

ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ದೀಪಾ 16 ಜಿಮ್ನಾಸ್ಟಿಕ್ ಆಟಗಾರರಲ್ಲಿ 14.100 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು. ಮತ್ತೊಬ್ಬ ಭಾರತದ ಪಟು ಬಿ. ಅರುಣಾ ರೆಡ್ಡಿ ಮೊಣಕಾಲು ನೋವಿನಿಂದ ಟೂರ್ನಿಯಿಂದ ಹೊರನಡೆದರು. ಅವರು ಮೆಲ್ಬೊರ್ನ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಪುರುಷರ ವಿಭಾಗದಲ್ಲಿ ರಾಕೇಶ್ ಪಾತ್ರ 29 ಆಟಗಾರರಲ್ಲಿ 14.000 ಅಂಕಗಳೊಂದಿಗೆ 14 ಸ್ಥಾನ ಪಡೆದರೆ, ಆಶಿಶ್(13.200) 24ನೇ ಸ್ಥಾನ ಪಡೆದರು.

Related Articles