ಮೊಂಟೆ ಕಾರ್ಲೋ ಮಾಸ್ಟರ್ಸ್: ನಡಾಲ್‌ ಚಾಂಪಿಯನ್

0
142

ಪ್ಯಾರಿಸ್‌: ಗೆಲುವಿನ ಲಯ ಮುಂದುವರಿಸಿರುವ ಸ್ಪೇನ್‌ ಟೆನಿಸ್ ತಾರೆ ರಾಫೆಲ್‌ ನಡಾಲ್‌ ಮೊಂಟೆ-ಕಾರ್ಲೋ ಮಾಸ್ಟರ್ಸ್‌ ಸೆಮಿಫೈನಲ್ ತಲುಪಿದ್ದಾರೆ. ಆದರೆ, ವಿಶ್ವ ಅಗ್ರ ಶ್ರೇಯಾಂಕದ ನೊವಾಕ್‌ ಜೊಕೊವಿಚ್‌ ಅವರು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ
ಟೂರ್ನಿಯಿಂದ ಹೊರ ನಡೆದರು.

ಅಮೋಘ ಪ್ರದರ್ಶನ ತೋರಿದ ರಾಫೆಲ್‌ ನಡಾಲ್‌, ಗ್ವಿಡೊ ಪೆಲ್ಲಾ ಅವರ ವಿರುದ್ಧ 7-6 (1), 6-3 ಅಂತರದಲ್ಲಿ ಗೆಲುವು ಸಾಧಿಸಿ 12 ನೇ ಪ್ರಶಸ್ತಿ ಹಾದಿಯತ್ತ ಹೆಜ್ಜೆ ಇಟ್ಟಿದ್ದಾರೆ. ಇದರೊಂದಿಗೆ ನಡಾಲ್‌ ಅವರ ಮೊಂಟ್‌-ಕಾರ್ಲೋ ಮಾಸ್ಟರ್ಸ್‌ ಟೂರ್ನಿಯ ದಾಖಲೆ 71-4 ಗೆ ಹೆಚ್ಚಿದೆ. 2015ರಲ್ಲಿ ಸ್ಪೇನ್‌ ಆಟಗಾರ ನೊವಾಕ್‌ ಜೊಕೊವಿಚ್‌ ಎದುರು ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು.
ಮೊದಲ ಸೆಟ್‌ನಲ್ಲಿ ನಡಾಲ್‌, ಗ್ವಿಡೊ ಪರಲ್ಲಾ ಎದುರು 1-4 ಹಿನ್ನಡೆ ಅನುಭವಿಸಿದ್ದರು. ಆದರೆ, ಟೈ ಬ್ರೇಕ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ 7-6 (1) ಅಂತರದಲ್ಲಿ ಜಯ ಸಾಧಿಸಿದರು.
” ಮೊದಲ ಸೆಟ್‌ನಲ್ಲಿ 1-4 ಹಿನ್ನಡೆಯಲ್ಲಿದ್ದೆ, ನಂತರ ಪೆಲ್ಲಾ ಎರಡು ಅಂಕಗಳ ಮುನ್ನಡೆ(1-5) ಗಳಿಸಿದರು. ಈ ಸಂದರ್ಭದಲ್ಲಿ ಗೆಲ್ಲುವು ಅಸಾಧ್ಯ. ಆದರೆ, ನನ್ನ ಅದೃಷ್ಟ ಚೆನ್ನಾಗಿತ್ತು. ಎದುರಾಳಿ ಆಟಗಾರನಿಗಿಂತ ಉತ್ತಮ ಪ್ರದರ್ಶನ ತೋರಿದ್ದರಿಂದ ಅಂತಿಮವಾಗಿ ಗೆಲುವು ಸಾಧಿಸಿದೆ” ಎಂದು ನಡಾಲ್‌ ಪಂದ್ಯದ ಬಳಿಕ ನುಡಿದರು.


ಅಂತಿಮ ನಾಲ್ಕರ ಘಟ್ಟದಲ್ಲಿ ರಾಫೆಲ್‌ ನಡಾಲ್‌ ಅವರು ಫ್ಯಾಬಿಯೊ ಫೊಗ್ನಿನಿ ಅವರ ವಿರುದ್ಧ ಸೆಣಸಲಿದ್ದಾರೆ. ಫ್ಯಾಬಿಯೊ ಫೊಗ್ನಿನಿ ಅವರು ಕ್ವಾರ್ಟರ್‌ ಪೈನಲ್‌ ಪಂದ್ಯದಲ್ಲಿ ಬೊರ್ನಾ ಕೊರಿಚ್‌ ಅವರ ವಿರುದ್ಧ 1-6, 6-3, 6-2 ಅಂತರದಲ್ಲಿ ಗೆಲುವು ಪಡೆದಿದ್ದರು. ನಡಾಲ್‌, ಫೊಗ್ನಿನಿ ಅವರಿಗಿಂತ 11-3 ಮುನ್ನಡೆ ದಾಖಲೆ ಹೊಂದಿದ್ದಾರೆ.

ಮೊಂಟೆ-ಕಾರ್ಲೊ ಮಾಸ್ಟರ್ಸ್ ಪ್ರಶಸ್ತಿ ಗೆಲ್ಲುವ ಪ್ರಮುಖ ಸಂಭಾವ್ಯ ಆಟಗಾರ ಸರ್ಬಿಯಾ ನೊವಾಕ್‌ ಜೊಕೊವಿಚ್‌ ಅವರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಆಘಾತ ಅನುಭವಿಸಿದರು. ರಷ್ಯಾದ ಡೇನಿಯಲ್‌ ಮೆಡ್ವೆಡೇವ್‌ ಅವರು ಜೊಕೊವಿಚ್‌ ಅವರ ವಿರುದ್ಧ  6-3, 4-6, 6-2 ಅಂತರದಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಪ್ರಸಕ್ತ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.
“ವಿಶ್ವ ಅಗ್ರ ಕ್ರಮಾಂಕದ ಆಟಗಾರನ ವಿರುದ್ಧ ಉತ್ತಮ ಪ್ರದರ್ಶನ ತೋರುವ ಮೂಲಕ ಜಯ ಸಾಧಿಸಿರುವ ಈ ಪಂದ್ಯ ನನ್ನ ವೃತ್ತಿ ಜೀವನದಲ್ಲೇ ಅತ್ಯುತ್ತಮವಾದದ್ದು. ಜೊಕೊವಿಚ್ ಅವರನ್ನು ಮೊದಲ ಬಾರಿ ಸೋಲಿಸಿ ಮೊಂಟ್‌ ಕಾರ್ಲೋ ಮಾಸ್ಟರ್ಸ್‌ ಸೆಮಿಫೈನಲ್‌ ಪ್ರವೇಶಿಸಿರುವುದು ತುಂಬಾ ಖುಷಿ ನೀಡಿದೆ” ಎಂದು ಮೆಡ್ವೆಡೇವ್‌ ಪಂದ್ಯದ ಬಳಿಕ ಹೇಳಿದರು.
ಮೆಡ್ವೆಡೇವ್‌ ಸೆಮಿಫೈನಲ್‌ ಪಂದ್ಯದಲ್ಲಿ ಸರ್ಬಿಯಾದ ಮತ್ತೊಬ್ಬ ಆಟಗಾರ ದುಸಾನ್‌ ಲ್ಯಾಜೊವಿಚ್‌ ಅವರ ವಿರುದ್ಧ ಇಂದು ಸೆಣಸಲಿದ್ದಾರೆ.  ಲಾಜೊವಿಚ್‌ ಅವರು ಲೊರೆಂಜೊ ಸೊನೆಗೊ ವಿರುದ್ಧ 6-4, 7-5 ಅಂತರದಲ್ಲಿ ಗೆಲುವು ಸಾಧಿಸಿದ್ದರು.