Thursday, April 25, 2024

ವಿಜಯ ಶಂಕರ್‌ ಆಯ್ಕೆ ಸಮರ್ಥಿಸಿಕೊಂಡ ಕೊಹ್ಲಿ

ಮುಂಬೈ

ಮುಂಬರುವ ಐಸಿಸಿ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಅಂಬಾಟಿ ರಾಯುಡು ಬದಲು ವಿಜಯ್‌ ಶಂಕರ್‌ ಅವರನ್ನು ಆಯ್ಕೆ ಮಾಡಿದ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್‌ ಅವರ ಕ್ರಮವನ್ನು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.

ಭಾರತ ತಂಡದ ಬ್ಯಾಟಿಂಗ್ ನಾಲ್ಕನೇ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಅವರನ್ನು ಹೆಚ್ಚು-ಕಡಿಮೆ ಒಂದು ವರ್ಷ ಆಡಿಸಲಾಗಿದೆ. ಆದರೆ, ಅವರು ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡಿಲ್ಲ. ಹಾಗಾಗಿ, ಕಳೆದ 15 ರಂದು ನಡೆದ ಐಸಿಸಿ ವಿಶ್ವಕಪ್‌ 15 ಆಟಗಾರರಲ್ಲಿ ಅವರನ್ನು ಪರಿಗಣಿಸಲು ಸಾಧ್ಯವಾಗಿಲ್ಲ ಎಂದರು.

” ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನಿಗಾಗಿ ಸಾಕಷ್ಟು ಕಸರತ್ತು ನಡೆಸಲಾಗಿತ್ತು. ಆದರೆ, ತಮಿಳುನಾಡು ಆಟಗಾರ ವಿಜಯ್‌ ಶಂಕರ್‌ ಆಗಮನದೊಂದಿಗೆ ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಕ್ಷೇತ್ರ ರಕ್ಷಣೆ ಸೇರಿದಂತೆ ಮೂರು ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದರು. ಹಾಗಾಗಿ, ನಾಲ್ಕನೇ ಕ್ರಮಾಂಕದಲ್ಲೂ ಅವರನ್ನು ಆಡಿಸಬಹುದೆಂದು ಅಂತಿಮವಾಗಿ ತೀರ್ಮಾನಿಸಲಾಯಿತು.” ಎಂದು ಸ್ಪಷ್ಟಪಡಿಸಿದ್ದಾರೆ.

“ವಿಜಯ್‌ ಶಂಕರ್‌ ಮೂಲತಃ ಬ್ಯಾಟ್ಸ್‌ಮನ್‌ ಆಗಿದ್ದು, ಹಾಗಾಗಿ ಅವರನ್ನು  ಆಯ್ಕೆ ಮಾಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಮೂರು ವಿಭಾಗದಲ್ಲೂ ಸಮತೋಲನ ಕಾಯ್ದುಕೊಂಡಿರುವ ಆಟಗಾರರು ಯಾವ ತಂಡದಲ್ಲೂ ಕಾಣಿಸಿಲ್ಲ. ಈ ದೃಷ್ಟಿಯಿಂದ ಅವರನ್ನು ಆಡಿಸಲು ಒಪ್ಪಿಗೆ ನೀಡಲಾಯಿತು.” ಎಂದು ಕೊಹ್ಲಿ ವಿಜಯ್‌ ಶಂಕರ್‌ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡರು.

ವಿಜಯ್‌ ಶಂಕರ್‌ ಅವರು ನಾಲ್ಕನೇ ಕ್ರಮಾಂಕಕ್ಕೆ ಮೊದಲ ಆಯ್ಕೆಯಾಗಿದ್ದು, ಕೆ.ಎಲ್‌ ರಾಹುಲ್‌ ಹಾಗೂ ದಿನೇಶ್‌ ಕಾರ್ತಿಕ್‌ ಅವರು ಬ್ಯಾಕ್‌ಅಪ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆಂದು ಎಂ.ಎಸ್‌.ಕೆ ಪ್ರಸಾದ್‌ ಹೇಳಿರುವುದುನ್ನು ಪ್ರತಿಪಾದಿಸಿರುವ ನಾಯಕ ಕೊಹ್ಲಿ, ” ವಿಶ್ವಕಪ್‌ಗೆ ಉತ್ತಮ ವಿಂಗಡಣೆಯೊಂದಿಗೆ ಭಾರತ ತೆರಳಲಿದೆ. ಯಾರೂ ಯಾವ ಕ್ರಮಾಂಕದಲ್ಲಿ ಆಡಬೇಕೆಂಬುದನ್ನು ತಡವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ.” ಎಂದಿದ್ದಾರೆ.

Related Articles