ಪ್ಯಾರಿಸ್:
ಕ್ಲೇ ಕೋರ್ಟ್ ನ ದೊರೆ , ಸ್ಪೇನ್ ನ ರಫೇಲ್ ನಡಾಲ್ ಅವರು ಫ್ರೆೆಂಚ್ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ದಾಖಲೆ ಬರೆದಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಡಾಲ್ 6-3, 5-7, 6-1, 6-1 ಅಂತರದಲ್ಲಿ ಆಸ್ಟ್ರಿಯಾದ ಡೋಮಿನಿಕ್ ಥೀಮ್ ಅವರನ್ನು ಮಣಿಸಿ 12ನೇ ಫ್ರೆೆಂಚ್ ಓಪನ್ ಪ್ರಶಸ್ತಿಿಗೆ ಮುತ್ತಿಟ್ಟರು. ಸತತ 3 ಗಂಟೆ ನಡೆದ ಪಂದ್ಯದಲ್ಲಿ ಕಠಿಣ ಹೋರಾಟ ನಡೆಸಿದ ಎರಡನೇ ಶ್ರೇಯಾಂಕಿತ ಆಟಗಾರ ಪಾರಮ್ಯ ಮೆರೆದರು. ಆ ಮೂಲಕ ಅವರು ವೃತ್ತಿಜೀವನದ 18ನೇ ಗ್ರ್ಯಾಾನ್ ಸ್ಲ್ಯಾಮ್ ಗೆಲುವು ಸಾಧಿಸಿದರು.
ಮೊದಲ ಸೆಟ್ ನಲ್ಲಿ ಸುಲಭವಾಗಿ ಗೆಲುವು ಸಾಧಿಸಿದ ನಡಾಲ್, ಎರಡನೇ ಸೆಟ್ ನಲ್ಲಿ ಅಂಕ ಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಆದರೆ, ಮೂರನೇ ಹಾಗೂ ನಾಲ್ಕನೇ ಸೆಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪಂದ್ಯವನ್ನು ತನ್ನದಾಗಿಸಿಕೊಂಡರು. ಸತತ ಎರಡನೇ ಬಾರಿಗೆ ಟೂರ್ನಿಯ ಫೈನಲ್‌ಗೆ ಪ್ರವೇಶ ಪಡೆದ ಡೋಮಿನಿಚ್ ಥೀಮ್ ಅವರು ಚೊಚ್ಚಲ ಬಾರಿಗೆ ಟೂರ್ನಿ ಚಾಂಪಿಯನ್ ಪಟ್ಟ ಅಲಂಕರಿಸುವ ಕನಸು ನುಚ್ಚುನೂರಾಯಿತು.