ಸ್ಪೋರ್ಟ್ಸ್ ಮೇಲ್ ವರದಿ
ಕಳೆದ ವರ್ಷವಷ್ಟೇ ಕಬಡ್ಡಿ ಅಭ್ಯಾಸ ಮಾಡಲು ಆರಂಭಿಸಿ ತಂಡವನ್ನು ಕಟ್ಟಿದ ಬೆಂಗಳೂರಿನ ಸುರಾನಾ ಕಾಲೇಜು ಕಬಡ್ಡಿ ತಂಡ ಆರ್‌ಎನ್‌ಎಸ್ ಪಿಯುಸಿ ಕಾಲೇಜು ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಗೌರವಕ್ಕೆ ಪಾತ್ರವಾಗಿದೆ.
ಶಿಕ್ಷಣದ ಜತೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಸುರಾನಾ ಕಾಲೇಜು ತಂಡ ಪ್ರತಿಯೊಂದು ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ. ಟೆನಿಸ್, ಹಾಕಿ, ಯೋಗ, ಕ್ರಿಕೆಟ್, ಜೂಡೋ, ಕರಾಟೆ ಹೀಗೆ ಅನೇಕ ಕ್ರೀಡೆಗಳಲ್ಲಿ ಇಲ್ಲಿಯ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡಾ ವಿಭಾಗದ ನಿರ್ದೇಶಕ ಶೀತಲ್ ಕಿರಣ್ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.