ರಾಜ್ಯ ಟಿ ಟಿ: ಸುಜನ್ ಗೆ ಪ್ರಶಸ್ತಿ

0
236

ಆರ್.ಎಸ್. ಶಕುಂತಲಾ ಸ್ಮಾರಕ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಸುಜನ್ ಭಾರದ್ವಾಜ್ 11-7, 11-8, 11-4 ಅಂತರದಲ್ಲಿ ಮಾರ್ಕಸ್ ಜಿಗು ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಸೆಮಿಫೈನಲ್‌ನಲ್ಲಿ ಮಾರ್ಕಸ್ ಅನಭವಿ ಆಟಗಾರ ವರುಣ್ ಕಶ್ಯಪ್ ವಿರುದ್ಧ ಜಯ ಗಳಿಸಿದ್ದರು. ಸುಜನ್ ಕೂಡ ಶ್ರೀಕಾಂತ್ ಕಶ್ಯಪ್ ವಿರುದ್ಧ ಜಯ ಗಳಿಸಿ ಫೈನಲ್ ಪ್ರವೇಶಿಸಿದ್ದರು.
ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ರೈನಾ ನರ್ಮಾ ವಿರುದ್ಧ 12-10, 11-6, 11-8 ಅಂತರದಲ್ಲಿ ಜಯ ಗಳಿಸಿ ಯಶಸ್ವಿನಿ ಘೋರ್ಪಡೆ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೆಮಿಫೈನಲ್‌ನಲ್ಲಿ ಯಶಸ್ವಿನಿ ಸುಭವಾಗಿ ದೇಶ್ನಾ ವಿರುದ್ಧ ಜಯ ಗಳಿಸಿದ್ದರು. ಅದೇ ರೀತಿ ರೈನಾ ನಾರಾ ಉತ್ತಮ ಪೈಪೋಟಿ ನೀಡಿದ ತೃಪ್ತಿ ಪುರೋಹಿತ್‌ಗೆ ಸೋಲುಣಿಸಿದ್ದರು.
ಕ್ಯಾಡೆಟ್ ಬಾಲಕರ ವಿಭಾಗದಲ್ಲಿ ವರುಣ್ ಬಿ ಕಶ್ಯಪ್ 12-10, 13-10, 4-11, 11-8 ಅಂತರದಲ್ಲಿ ಹೃಶಿಕೇಶ್‌ಗೆ ಸೋಲುಣಿಸಿ ಪ್ರಶಸ್ತಿ ಗೆದ್ದರು. ಬಾಲಕಿಯರ ಕ್ಯಾಡೆಟ್ ವಿಭಾಗದಲ್ಲಿ  ಹ್ರಾ ತಹೀನಾ ವಿರುದ್ಧ 13-11, 14-11, 11-7 ಅಂತರದಲ್ಲಿ ಗೆದ್ದ ನಿಹಾರಿಕಾ ಪ್ರಶಸ್ತಿ ಗೆದ್ದರು.