Sunday, September 8, 2024

ಅಮೃತಾ, ನಿಮೃತಾ ಶಾಸ್ತ್ರೀ ಏನ್ ನಿಮ್ ಕಥಾ?

ಸ್ಪೋರ್ಟ್ಸ್ ಮೇಲ್ ವರದಿ

ತಿಂಗಳುಗಟ್ಟಲೆ ಹೆಂಡತಿ ಬಿಟ್ಟು ಮನೆಯಿಂದ ಹೊರಗಿರುವ ಕ್ರಿಕೆಟಿಗರ ಬಗ್ಗೆ ಪ್ರಕಟವಾದ ಹಾಗೂ ಪ್ರಕಟವಾಗದ ಅನೇಕ ಸುದ್ದಿ ಕೇಳಿದ್ದೇವೆ. ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರೀ ಕೂಡ ಇದರಿಂದ ಹೊರತಾಗಿಲ್ಲ. 56 ವರ್ಷದ ಶಾಸ್ತ್ರೀ 36 ವರ್ಷದ ನಟಿ ನಿಮೃತಾ ಕೌರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮುಂಬಯಿ ಮಿರರ್ ವರದಿ ಮಾಡಿದೆ.

ಪತ್ನಿ ರಿತು ಅವರಿಂದ ದೂರವಾಗಿರುವ ಶಾಸ್ತ್ರೀ ಇಳಿ ವಯಸ್ಸಿಗೆ ಆಧಾರವಾಗಲಿ ಎಂದು ನಿಮೃತಾ ಅವರೊಂದಿಗೆ ಅಲ್ಲಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ  ಈ ಜೋಡಿ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಜನರು ಮಾತನಾಡುತ್ತಿದ್ದರೂ ಈ ಜೋಡಿ ಮಾತ್ರ ತಮಗೇನೂ ಗೊತ್ತಿಲ್ಲ ಎಂಬಂತೆ ಪ್ರೀತಿ ಮುಂದುವರಿಸಿದೆ.
ಹಾಗಂತ ರವಿಶಾಸ್ತ್ರೀ ಅವರದ್ದು ಇದು ಮೂರನೇ ಇನಿಂಗ್ಸ್, ೮೦ರ ದಶಕದಲ್ಲಿ ಅಮೃತಾ ಸಿಂಗ್ ಅವರೊಂದಿಗೆ ಪ್ರೀತಿಯ ಬಲೆಯಲ್ಲಿ ಸಿಕ್ಕಿದ್ದ ಶಾಸ್ತ್ರೀ ನಂತರ ಅವರಿಂದ ದೂರವಾಗಿದ್ದರು. ನಿಮೃತಾ ಜನಪ್ರಿಯ ವೆಬ್ ಸರಣಿಯ ಶೂಟಿಂಗ್‌ನಲ್ಲಿ ತಲ್ಲೀನರಾಗಿದ್ದಾರೆ. ಶಾಸ್ತ್ರೀ ಭಾರತ ತಂಡದೊಂದಿಗೆ ಕೋಚಿಂಗ್ ಕೆಲಸದಲ್ಲಿ ಮಗ್ನ.  ಈ ನಡುವೆ ನಿಮೃತಾ ಕೌರ್ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

Related Articles