ಕೊಡಗಿನ ಕ್ರೀಡಾಪಟುಗಳ ಗಮನಕ್ಕೆ

0
285
ಸ್ಪೋರ್ಟ್ಸ್ ಮೇಲ್ ವರದಿ

ಕೊಡಗಿನಲ್ಲಿ ಸುರಿದ ಮಳೆ, ಉಂಟಾದ ಹಾನಿ ಕರ್ನಾಟಕದ ಎಲ್ಲೆಡೆ ಎಚ್ಚರಿಕೆಯ ಕರೆಯನ್ನು ನೀಡಿದಂತಿದೆ. ಈ ಮಳೆ ಕೊಡಗಿನ ಸಾವಿರಾರು ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹಲವಾರು ಜನ ಸಂತೃಸ್ತರಾಗಿದ್ದಾರೆ. ಈಗ ಕೊಡಗು ಸಹಜ ಸ್ಥಿತಿಯತ್ತ ಸಾಗುತ್ತಿದೆ. ಸಂತೃಸ್ತರ ನೆರವಿಗಾಗಿ ಸರಕಾರಿ ಸಂಘಟನೆಗಳು, ಸೇನಾ ಸಿಬ್ಬಂದಿಗಳು, ಖಾಸಗಿ ಸಂಘಟನೆಗಳು ಅಹರ್ನಿಶಿ ದುಡಿಯುತ್ತಿವೆ. ಕೊಡಗು ಸಹಜ ಸ್ಥಿತಿಗೆ ಬರಲು ತನು, ಮನ ಹಾಗೂ ಧನದ ನೆರವಿನ ಅಗತ್ಯವಿದೆ.

ಅಲ್ಲಿ ಸಂಕಷ್ಟವನ್ನು ಎದುರಿಸುತ್ತಿರುವವರ ಬಗ್ಗೆ ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಗೆ ಬಹಳ ನೋವಿದೆ. ಕೊಡಗು ಕರ್ನಾಟಕ ಹಾಗೂ ಭಾರತದ ಕ್ರೀಡೆಗೆ ಸಾಕಷ್ಟು ಸಾಧಕರನ್ನು ನೀಡಿದೆ. ಈ ಕಾರ್ಯ ಮುಂದುವರಿಯಬೇಕಾಗಿದೆ. ಅನೇಕ ಕ್ರೀಡಾಪಟುಗಳ ಕುಟುಂಬ ಈ ನೆರೆ ಹಾವಳಿಗೆ ತುತ್ತಾಗಿರಲೂಬಹುದು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕ್ರೀಡಾ ಕುಟುಂಬಗಳಿಗೆ ನಮ್ಮಿಂದಾದ ನೆರವನ್ನು ನೀಡಲು ಯೋಚಿಸಿದ್ದೇವೆ.
ಕೊಡಗು ಮೂಲದ ಕ್ರೀಡಾಪಟುಗಳ ಕುಟುಂಬ ನೆರೆ ಹಾವಳಿಗೆ ತುತ್ತಾಗಿ ನಷ್ಟ, ಕಷ್ಟಗಳನ್ನು ಅನುಭವಿಸುತ್ತಿದ್ದರೆ, ಅಂಥ ಕ್ರೀಡಾಪಟುಗಳು ರಾಜ್ಯ ಒಲಿಂಪಿಕ್ಸ್ ಸಂಸ್ಥೆಗೆ ಆಗಮಿಸಿ ನೆರವನ್ನು ಪಡೆಯಬಹುದು ಎಂದು ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಎಂಎಲ್‌ಸಿ ಕೆ. ಗೋವಿಂದ ರಾಜ್ ಅವರು ವಿನಂತಿ ಮಾಡಿಕೊಂಡಿದ್ದಾರೆ.
ದಯವಿಟ್ಟು  ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆ,  ಶ್ರೀ ಕಂಠೀರವ ಕ್ರೀಡಾಂಗಣ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಕಟ್ಟಡದ ಹತ್ತಿರ, ಕಸ್ತೂರ್ಬಾ ರೋಡ್,  ಬೆಂಗಳೂರು 560001, ದೂರಾವಣಿ ಸಂಖ್ಯೆ -080- 22275656 ಸಂಪರ್ಕಿಸಬಹುದು.
ಇಮೇಲ್ ಸಂಪರ್ಕ- koabng@gmail.com