Thursday, October 10, 2024

ತೇನ್‌ಸಿಂಗ್ ನೋರ್ಗೆ ಪ್ರಶಸ್ತಿ ಗೆದ್ದ ಕನ್ನಡಿಗ ಮಣಿಕಂಠನ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್


ಇಂದು ರಾಷ್ಟ್ರೀಯ ಕ್ರೀಡಾ ದಿನ. ಪ್ರತಿ ವರ್ಷವೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ರಾಷ್ಟ್ರೀಯ ಕ್ರೀಡಾ ಕನ್ನಡಿಗರ ಪಾಲಿಗೆ ಹೆಮ್ಮೆಯ ದಿನ. ಏಕೆಂದರೆ ವಿಶೇಷ ಚೇತನ ಸಾಹಸ ಕ್ರೀಡಾಪಟು ಕೆ. ಮಣಿಕಂಠನ್ ಸಾಹಸ ಕ್ರೀಡಾಪಟುಗಳಿಗೆ ನೀಡುವ ಪ್ರತಿಷ್ಠಿತ ತೇನ್ ಸಿಂಗ್ ನೋರ್ಗೆ ಸಾಹಸ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಪಡೆಯುತ್ತಿದ್ದಾರೆ.


ಬೆಂಗಳೂರಿನ ಶ್ರೀರಾಮ್‌ಪುರದ ಗಲ್ಲಿಯೊಂದರಲ್ಲಿ ಅಗರಬತ್ತಿ ಕಟ್ಟುತ್ತಿದ್ದ ಕುಟುಂಬವೊಂದರಿಂದ ಬಂದು ಸ್ಪೋರ್ಟ್ ಕ್ಲೆ‘ಮಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಣಿಕಂಠನ್ ಇಂದು  ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. 


ಜಾಗತಿಕ ಮಟ್ಟದಲ್ಲಿ 5 ಚಿನ್ನ, 10 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದಿರುವ ಮಣಿಕಂಠನ್ ಸಾಗಿ ಬಂದ ಹಾದಿ ಅತ್ಯಂತ ಕಠಿಣವಾದುದು. ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಈ ಕ್ರೀಡಾ ಸಾಧಕ ಇಂದು ದೇಶದ ಅಗ್ರ ಶ್ರೇಯಾಂಕದ ಸಾಹಸ ಕ್ರೀಡಾಪಟು. ಸ್ವಲ್ಪವೂ ಬಿಡುವು ಇಲ್ಲದೆ ನಿರಂತರವಾಗಿ ಕಂಠೀರವ ಕ್ರೀಡಾಂಗಣದಲ್ಲಿರುವ ಸ್ಪೋರ್ಟ್ ಕ್ಲೆ‘ಮಿಂಗ್ ವಾಲ್‌ನಲ್ಲಿ ಅಭ್ಯಾಸ ನಡೆಸಿದ ಪರಿಣಾಮ ಇಂದು ಮಣಿಕಂಠನ್ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ನೆರವಿನಿಂದ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಮಣಿಕಂಠನ್‌ಗೆ ಆರಂ‘ದಲ್ಲಿ ಸದಾ ಪ್ರೋತ್ಸಾಹ ನೀಡುತ್ತಿದ್ದುದು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಲಹೆಗಾರ ಹಾಗೂ ಸಾಹಸ ಕ್ರೀಡಾ ತರಬೇತುದಾರ ಕೀರ್ತಿ ಪಯಾಸ್.  ಈಗ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಹಾಗೂ ಐಟಿ, ಬಿಟಿ  ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸಿ.ಎನ್. ಅವರು ಕೂಡ ಮಣಿಕಂಠನ್ ಪ್ರತಿಭೆಗೆ ಪೋತ್ಸಾಹ ನೀಡಿದ್ದರು. 


ಸಾಹಸ ಕ್ರೀಡೆಗೆ ನೀಡಲಾಗುವ ಉನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಪಡೆಯುತ್ತಿರುವುದು ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಮಣಿಕಂಠನ್ ಪಾತ್ರರಾಗಿದ್ದಾರೆ. ಸದ್ಯ ದಿಲ್ಲಿಯಲ್ಲಿರುವ ಮಣಿಕಂಠನ್ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿ, ‘ಕನ್ನಡಿಗರಿಗೆ ನನ್ನನ್ನು ಪರಚಯಿಸಿದ್ದು ನೀವು, ಹಾಗಾಗಿ ಈ ಸಂತಸದ ಸುದ್ದಿಯನ್ನು ಮೊದಲು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಪ್ರಶಸ್ತಿ ನನ್ನ ಮುಂದಿನ ಸಾ‘ನೆಗೆ ವೇದಿಕೆಯಾಗಲಿದೆ. ಮುಂದಿನ ಒಲಿಂಪಿಕ್ಸ್ ನಲ್ಲಿ ಸ್ಪೋರ್ಟ್ಸ್ ಕ್ಲೆ‘ಮಿಂಗ್ ಪ್ರದರ್ಶನಗೊಳ್ಳಲಿದೆ. ಆ ನಂತರದ ಒಲಿಂಪಿಕ್ಸ್‌ನಲ್ಲಿ ಅದು ಸ್ಪರ್ಧೆಯಾಗಿರುತ್ತದೆ. ದೇಶಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಗುರಿ, ಅದಕ್ಕಾಗಿ ನಿರಂತರ ಶ್ರಮ ಮುಂದುವರಿಯುತ್ತದೆ,‘ ಎಂದರು.


ಮಣಿಕಂಠನ್ ಐದು ವಿಶ್ವ ಚಾಂಪಿಯನ್‌ಷಿಪ್ ಅನ್ನು ಪೂರ್ಣಗೊಳಿಸಿದ ಮೊದಲಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೌಂಟ್ ಎವರೆಸ್ಟ್ ಶಿಖರವೇರಿದ ಮೊದಲ ವ್ಯಕ್ತಿ  ತೇನ್ ಸಿಂಗ್ ನೋರ್ಗೆ ಹೆಸರಿನಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭೂಸಾಹಸದಲ್ಲಿ ಮಣಿಕಂಠನ್‌ಗೆ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿ ಜಲ, ವಾಯು ಸಾಹಸ ಮತ್ತು ಜೀವನಶ್ರೇಷ್ಠ ಸಾಧನೆಯ ಪ್ರಶಸ್ತಿಯನ್ನೂ ನೀಡಲಾಗುತ್ತದೆ.

Related Articles