Wednesday, May 31, 2023

ವಿಶ್ವ ರ‌್ಯಾಲಿ ಚಾಂಪಿಯನ್ ಷಿಪ್ ಗೆ ಗೌರವ್ ಗಿಲ್

ಸ್ಪೋರ್ಟ್ಸ್ ಮೇಲ್ ವರದಿ

ಅರ್ಜುನ ಪ್ರಶಸ್ತಿ ವಿಜೇತ ಮೊದಲ ಹಾಗೂ ಏಕೈಕ ರ‌್ಯಾಲಿ ಪಟು ಗೌರವ್ ಗಿಲ್ ಅವರು ಟರ್ಕಿಯಲ್ಲಿ ಇದೇ ತಿಂಗಳ 12 ರಿಂದ 15ರವರೆಗೆ ನಡೆಯಲಿರುವ ರ‌್ಯಾಲಿ ಆಫ್ ಟರ್ಕಿಯಲ್ಲಿ ಪಾಲ್ಗೊಳ್ಳುವ ಮೂಲಕ ಫಿಯಾ ವಿಶ್ವ ರಾಲಿ ಚಾಂಪಿಯನ್ ಷಿಪ್ 2ರಲ್ಲಿ  ತಮ್ಮ ಛಾಪು ಮೂಡಿಸಲಿದ್ದಾರೆ.

ಮೂರು ಬಾರಿ ಎಪಿಆರ್ ಸಿ ಹಾಗೂ ಆರು ಬಾರಿ ಐಎನ್ಆರ್ಸಿ ಚಾಂಪಿಯನ್ ಪಟ್ಟ ಗೆದ್ದಿರುವ ಗಿಲ್, ಎಂ-ಸ್ಪೋರ್ಟ್ ಅಭಿವೃದ್ಧಿಪಡಿಸಿರುವ, ಜೆಕೆ ಟಯರ್ಸ್ ಮೋಟೋ ಸ್ಪೋರ್ಟ್ ಪ್ರೋತ್ಸಾಹಿಸಿರುವ 1.6 ಟರ್ಬೋ ಆರ್5 ವಾಹನವನ್ನು ಚಲಾಯಿಸಲಿದ್ದಾರೆ. ಟರ್ಕಿಯಲ್ಲಿ ನಡೆಯುವ ಈ ಬಾರಿ ಟಕ್ರಿಯಲ್ಲಿ ನಡೆಯಲಿರುವ ರ‌್ಯಾಲಿ ಜೆಲ್ಲಿಕಲ್ಲಿನಿಂದ ಕೂಡಿದ ಮಾಗರ್ದಲ್ಲೇ ಹೆಚ್ಚಾಗಿ ನಡೆಸುವುದರಿಂದ ಗಿಲ್ ಈ ಬಾರಿ ಮಿಂಚನ ಸ್ಪರ್ಧೆ ನೀಡುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಇಂತಹ ಮಾರ್ಗಗಳೆಂದರೆ ಗಿಲ್ ಗೆ ಫೇವರಿಟ್.

“ಈ ವರ್ಷ ನಾನು ಸ್ಪರ್ಧಿಸಬೇಕಾದ ರ‌್ಯಾಲಿಯನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತೇವೆ.ಬಳಸುತ್ತಿರುವ ಕಾರು, ಮಾರ್ಗ ಮತ್ತು ಸಾಮರ್ಥ್ಯ ಇವುಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ,” ಎಂದು ಗಿಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. “ ಜನಪ್ರಿಯ ತಂಡದೊಂದಿಗೆ ಮೊದಲ ಬಾರಿ ಸ್ಪರ್ಧೆ ಮಾಡುವುದಕ್ಕೆ ಸಾಕಷ್ಟು ಉತ್ಸುಕನಾಗಿದ್ದೇನೆ.. ಜೆಕೆ ಮೋಟೋಸ್ಪೋರ್ಟ್ ನಂಥ ತಂಡ ಬೆಂಬಲಕ್ಕಿರುವುದು ಹೊಸ ಹುಮ್ಮಸ್ಸು ತಂದಿದೆ,” ಎಂದರು.
ಅರ್ಜುನ ಪ್ರಶಸ್ತಿ ಗೆದ್ದಿರುವ ಮೊದಲ ರ‌್ಯಾಲಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗಿಲ್, 2018ರ ಡಬ್ಲ್ಯುಆರ್ಸಿ-2 ನಲ್ಲಿ ತೃಪ್ತಿದಾಯಪ ಪ್ರದರ್ಶನ ತೋರಿದ್ದರು. ಇಟಲಿ, ಫಿನ್ಲೆಂಡ್, ವೇಲ್ಸ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ನಾಲ್ಕು ರ‌್ಯಾಲಿಗಳಲ್ಲಿ ಅವರು ಪಾಲ್ಗೊಂಡಿದ್ದರು. ಜಾಗತಿಕ ಮಟ್ಟದ ರ‌್ಯಾಲಿಯಲ್ಲಿ ಕಂಡುಬರುವ ಕಂಠಿಣ ಸವಾಲುಗಳನ್ನು ಎದುರಿಸಿಯೂ ಗಿಲ್ 11 ಸ್ಟೇಜ್ ಗಳನ್ನು ಗೆದ್ದಿದ್ದಿರುವುದು ಗಮನಾರ್ಹ.
ಅರ್ಜುನ ಪ್ರಶಸ್ತಿ ಗೆದ್ದಿರುವ ಶುಭ ಸಂದರ್ಭದಲ್ಲಿ ಜೆಕೆ ಟಯರ್ ಮೋಟೋಸ್ಪೋರ್ಟ್ ಗಿಲ್ ಅವರನ್ನು ಸನ್ಮಾನಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಜೆಕೆ ಟಯರ್ಸ್ ನ ಮಾರುಕಟ್ಟೆ ನಿರ್ದೇಶಕ ವಿಕ್ರಮ್ ಮಲ್ಹೋತ್ರಾ ಚಾಂಪಿಯನ್ ಗಿಲ್ ಅವರನ್ನು ಅಭಿನಂದಿಸಿದರು. “ಭಾರತದಲ್ಲಿ ಮೋಟಾರ್ ಸ್ಪೋರ್ಟ್ಸ್ ಗೆ ಪ್ರೋತ್ಸಾಹ ನೀಡುವಲ್ಲಿ ಜೆಕೆ ಟಯರ್ಸ್ ಅಗ್ರ ಪಂಕ್ತಿಯಲ್ಲಿದೆ. ಚಿಕ್ಕ ಮಕ್ಕಳ ರೇಸಿಂಗ್ ನಲ್ಲಿ ಶೇ.90ರಷ್ಟು ಜಾರಿಗೆ ತಂದದ್ದು ಜೆಕೆ ಟಯರ್ಸ್, ಗಿಲ್ ಅವರೊಂದಿಗಿನ ಸಂಬಂಧವೂ ಯಶಸ್ಸಿನ ಹಾದಿಯನ್ನು ಅನುಸರಿಸಿದ್ದು, ದೇಶೀಯ ರ‌್ಯಾಲಿಗಳಲ್ಲಿ ಅವರು ತೋರಿದ ಸಾಧನೆ ನಮ್ಮ ಟಯರ್ ಉದ್ಯಮದಲ್ಲಿ ಏಳ್ಗೆಯನ್ನು ಕಾಣಲು ಸಾಧ್ಯವಾಯಿತು. ಅಂತಾರಾಷ್ಟ್ರೀಯ ರ‌್ಯಾಲಿಯಲ್ಲೂ ಉತ್ತಮ ಪ್ರದರ್ಶನ ತೋರಿದ ಗಿಲ್ ನಮ್ಮಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದರಲ್ಲದೆ, ನಮ್ಮ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಶಕ್ತಿವರ್ಧಕವಾದರು. ಅವರ ಈ ಸಾಧನೆ ಮುಂದಿನ ಪೀಳಿಗೆಗೆ ನೆರವಾಗಲಿದೆ,” ಎಂದರು, ಗಿಲ್ ಅವರು ಇದೇ ಮೊದಲ ಬಾರಿಗೆ ನೋಂದಾಯಿತ ಸರ್ಧಿಯಾಗಿ ಪಾಲ್ಗೊಳ್ಳುತ್ತಿರುವುದು, ದೇಶದ ಮೋಟಾರ್ ಸ್ಪೋರ್ಟ್ಸ್ ನಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು.
“ಕಳೆದ ವರ್ಷ ಗಿಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು, ಈ ವರ್ಷವೂ ಅವರೊಂದಿಗೆ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ. ಮೂರು ಬಾರಿ ಏಷ್ಯಾ ಪೆಸಿಫಿಕ್ ಚಾಂಪಿಯನ್ ಪಟ್ಟ ಗೆದ್ದಿರುವ ಗಿಲ್, ನಿಜವಾಗಿಯೂ ಒಬ್ಬ ಪ್ರತಿಭಾವಂತ ಚಾಲಕ,ಫಿಯಾ ವಿಶ್ವ ರ‌್ಯಾಲಿ 2ರಲ್ಲಿ ಅವರು ಉತ್ತಮವಾಗಿ ಪ್ರದರ್ಶನ ತೋರುತ್ತಾರೆಂಬ ನಂಬಿಕೆ ಇದೆ,” ಎಂದು ತಂಡದ ಪ್ರಿನ್ಸಿಪಾಲ್ ರಿಚಾರ್ಡ್ ಮಿಲ್ಲೆನರ್ ಹೇಳಿದ್ದಾರೆ.
“ಅವರ ನಮ್ಮ ಇತ್ತೀಚಿನ ಹೊಸ ರ‌್ಯಾಲಿ ಕಾರನ್ನು ಚಲಾಯಿಸಲಿದ್ದಾರೆ,R5 MkII ಈ ಬೇಸಿಗೆಯಲ್ಲಿ ಕಾರು ಮೊದಲ ಬಾರಿಗೆ ಸ್ಪರ್ಧಾತ್ಮಕ ರ‌್ಯಾಲಿಗೆ ಪದಾರ್ಪಹಣೆ ಮಾಡಲಿದೆ, ಹಲವಾರು ರೀತಿಯ ತಂತ್ರಜ್ಞಾನ ಹಾಗೂ ಪ್ರಯೋಗಗಳ ಮೂಲಕ  ಈ ಕಾರನ್ನು ಸಜ್ಜುಗೊಳಿಸಲಾಗಿದೆ, ಜಗತ್ತಿನ ಶ್ರೇಷ್ಠ ರ‌್ಯಾಲಿ ಪಟುಗಳಿಗೆ ಸೂಕ್ತವಾದ ಈ ರೀತಿಯ ಚಾಲಕರಲ್ಲಿ ಗಿಲ್ ಕೂಡ ಒಬ್ಬರು ಎನ್ನಲು ಹೆಮ್ಮೆಯಾಗುತ್ತಿದೆ,” ಎಂದು ಅವರು ಹೇಳಿದರು.
“ಭಾರತದ ಮೋಟಾರ್ ಸ್ಪೋರ್ಟ್ಸ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರೆಲ್ಲರಿಗೂ ಇದೊಂದು ಬದಲಾವಣೆಯ ಪರ್ವ, ಗೌರವ ಅವರನ್ನು ಸಾಧನೆಯನ್ನು ಗುರುತಿಸಿರುವನದನ್ನು ಗಮನಿಸಿದ ಶಾಲಾ ಕಾಲೇಜಿನ ಯುವಕರು ಕೂಡ ಮೋಟಾರ್ ಸ್ಪೋರ್ಟ್ಸ್ ನಲ್ಲೂ ಸಾಧನೆ ಮಾಡಿದರೆ ಇತರ ಕ್ರೀಡೆಗಳಂತೆ ಗುರುತಿಸುತ್ತಾರೆ ಎಂಬುದನ್ನು ಮನಗಂಡಿದ್ದಾರೆ,” ಎಂದು ಜೆಕೆ ಟಯರ್ಸ್ ಮೋಟೋ ಸ್ಪೋರ್ಟ್ಸ್ ನ ಪ್ರಧಾನ ಸಂಜಯ ಶರ್ಮಾ ಹೇಳಿದರು.

2019ರ ಟರ್ಕಿ ರ‌್ಯಾಲಿಯಲ್ಲಿ ಸ್ಪರ್ಧಿಗಳು 988.50 ಕಿ,ಮೀ, ಅಂತರವನ್ನು ಪೂರ್ಣಗೊಳಿಸಲಿದ್ದಾರೆ, ಇದರಲ್ಲಿ 17 ವಿಶೇಷ ಸ್ಟೇಜ್ ಗಳಿದ್ದು, ಇದರ ಅಂತರ 310 ಕಿಮೀ. ಆಗಿರುತ್ತದೆ.ಡಬ್ಲುಆರ್ ಸಿ ರ‌್ಯಾಲಿಯ ನೇರ ಪ್ರಸಾರ ಮಾಡಲಿದ್ದು, 40 ದೇಶಗಳಲ್ಲಿ ನೇರ ಪ್ರಸಾರಗೊಳ್ಳಲಿದೆ.

Related Articles