ಬೆಂಗಳೂರು: ಇತ್ತೀಚಿಗೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಅಖಿಲ ಭಾರತ ಅಂತರ್ ರೈಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿಯ ನೈಋತ್ಯ ರೇಲ್ವೆಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿ ಪುರುಷರ ವಿಭಾಗದಲ್ಲಿ ರನ್ನರ್‌ಅಪ್ ಹಾಗೂ ಸಮಗ್ರ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಸ್ಥಾನ ಗೆದ್ದುಕೊಂಡಿದೆ.
ಕನ್ನಡಿಗರ ಪ್ರಭುತ್ವ:
6 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆಲ್ಲುವ ಮೂಲಕ ನೈಋತ್ಯ ರೈಲ್ವೇಯ ಕ್ರೀಡಾಪಟುಗಳು ಅದ್ಭುತ ಪರದರ್ಶನ ತೋರಿದ್ದಾರೆ. ಇದರಲ್ಲಿ ಕರ್ನಾಟಕದ ಜೆಸ್ಸಿ ಸಂದೇಶ್, ವಿಶ್ವಂಭರ ಹಾಗೂ ಅಮರ್‌ನಾಥ್ ಎಂಡಿ ಅದ್ಭುತ ಸಾಧನೆ ತೋರಿರುವುದ ಗಮನಾರ್ಹ.
ಹೈಜಂಪ್‌ನಲ್ಲಿ ಕರ್ನಾಟಕದ ಜೆಸ್ಸಿ ಸಂದೇಶ್ ಚಿನ್ನದ ಸಾಧನೆ ಮಾಡಿದರೆ, ವಿಶ್ವಂಭರ ರಿಲೇಯಲ್ಲಿ ಬೆಳ್ಳಿ ಗೆದ್ದಿದ್ದಾರೆ. ಯುವ ಹರ್ಡಲ್ಸ್ ಓಟಗಾರ ಅಮರನಾಥ್ 400ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್ ಏಷ್ಯನ್ ಚಾಂಪಿಯನ್‌ಷಿಪ್ ಪದಕ ವಿಜೇತ ಶಿವಾನಂದ ಅವರು ರೇಲ್ವೆ ಅಥ್ಲೆಟಿಕ್ಸ್ ತಂಡದ ಪ್ರಧಾನ ಕೋಚ್ ಆಗಿದ್ದು, ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್ ನಾಗರಾಜ್ ಅವರು ಕೂಡ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವುದು ನೈಋತ್ಯ ರೇಲ್ವೆ ಉತ್ತಮ ಪ್ರದರ್ಶನ ತೋರಲು ಪ್ರಮುಖ ಕಾರಣವಾಗಿದೆ.
ಕಪಿಲ್ ಆನಂದ್ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ಲಾಂಗ್ ಜಂಪ್‌ನಲ್ಲಿ ಸಾಹಿಲ್‌ಗೆ ಚಿನ್ನ, ರೇಸ್‌ವಾಕ್‌ನಲ್ಲಿ ನೀನಾ ಕೆಟಿಗೆ ಕಂಚಿನ ಪದಕ, ರೇಸ್‌ವಾಕ್‌ನಲ್ಲಿ ರವಿನಾ ಕೆ ಚಿನ್ನದ ಪದಕ, ಪುರುಷರ ರೇಸ್‌ವಾಕ್‌ನಲ್ಲಿ ಜುನೇದ್ ಖಾನ್‌ಗೆ ಚಿನ್ನ, ಶಾಟ್‌ಪುಟ್‌ನಲ್ಲಿ ಆಶೀಶ್ ಬಲೋಟಿಯಾಗೆ ಕಂಚಿನ ಪದಕ, 4×400 ಮೀ ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ, ವನಿತೆಯರ 400 ಮೀ. ಹರ್ಡಲ್ಸ್‌ನಲ್ಲಿ ಲೋಕನಾಯಕಿಗೆ ಕಂಚಿನ ಪದಕ, ಡೆಕಾಥ್ಲಾನ್‌ನಲ್ಲಿ ಸುರೇನ್‌ಗೆ ಚಿನ್ನದ ಪದಕ.