ಸ್ಪೋರ್ಟ್ಸ್ ಮೇಲ್ ವರದಿ
ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸೆ. 15 ಮತ್ತು 16ರಂದು ನಡೆದ ದಕ್ಷಿಣ ವಲಯ ಅಂತರ್‌ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳು ಎರಡು ಕೂಟ ದಾಖಲೆಗಳೊಂದಿಗೆ 10 ಚಿನ್ನ, 20 ಬೆಳ್ಳಿ ಹಾಗೂ 10 ಕಂಚಿನ ಪದಕಗಳೊಂದಿಗೆ ಒಟ್ಟು 40 ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಎರಡು ಕೂಟ ದಾಖಲೆ
20 ವರ್ಷ ವಯೋಮಿತಿಯ ಜಾವೆಲಿನ್ ಎಸೆತದಲ್ಲಿ ಮನು ಡಿಪಿ 66.33 ಮೀ. ದೂರಕ್ಕೆ ಎಸೆದು ನೂತನ ಕೂಟ ದಾಖಲೆ ಬರೆದಿದ್ದಾರೆ. 18 ವರ್ಷ ವಯೋಮಿತಿಯ ಬಾಲಕಿಯರ ಹೈಜಂಪ್‌ನಲ್ಲಿ ಸುಪ್ರಿಯಾ 1.75 ಮೀ. ಎತ್ತರಕ್ಕೆ ಜಿಗಿದು ಹೊಸ ದಾಖಲೆ ಬರೆದರು.
16 ವರ್ಷ ವಯೋಮಿತಿಯ ಬಾಲಕರ ವಿಭಾಗ
ಶಾಟ್‌ಪುಟ್ ವಿಭಾಗದಲ್ಲಿ ಗಣೇಶ್ ತೃತೀಯ, ಸಾಗರ್‌ದೀಪ್ ದೀಪ್ ಹ್ಯಾಮರ್ ಎಸೆತದಲ್ಲಿ ದ್ವಿತೀಯ, ಶ್ರೀಕಾಂತ್ ಶಾಟ್‌ಪುಟ್‌ನಲ್ಲಿ ದ್ವಿತೀಯ.
16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ
800 ಮೀ. ಓಟದಲ್ಲಿ ದೀಪಾಶ್ರೀ ತೃತೀಯ, ಜಾವೆಲಿನ್ ಎಸೆತದಲ್ಲಿ ವೀಣಾ ಟಿ. ತೃತೀಯ, ಶಾಟ್‌ಪುಟ್‌ನಲ್ಲಿ ರಮ್ಯಶ್ರೀ ಜೈನ್ ದ್ವಿತೀಯ.
18 ವರ್ಷ ವಯೋಮಿತಿಯ ಬಾಲಕರ ವಿಭಾಗ
ಹ್ಯಾಮರ್ ಎಸೆತದಲ್ಲಿ ರಾಹುಲ್ ರಾಮ್ ಪ್ರಥಮ, ಮುತ್ತಪ್ಪ ತೃತೀಯ, ನಾಗೇಂದ್ರ ಅಣ್ಣಪ್ಪ ಶಾಟ್‌ಪುಟ್ ದ್ವಿತೀಯ, ಡಿಸ್ಕಸ್ ಎಸೆತ ನಾಗೇಂದ್ರ ಅಣ್ಣಪ್ಪ ಪ್ರಥಮ, 1500 ಮೀ. ಓಟ ಆಶ್ರಿತ್ ದ್ವಿತೀಯ, 1500 ಮೀ. ಓಟ ಓಂಕಾರ್ ತೃತೀಯ, ಮಿಡ್ಲೆ ರಿಲೇ ರಿನ್ಸ್ ಮಿಲನ್, ಕೃಷ್ಣ ದ್ವಿತೀಯ.
18ರ ವಯೋಮಿತಿಯ ಬಾಲಕಿಯರ ವಿಭಾಗ
100 ಮೀ. ಓಟ- ಜೋತ್ಸ್ನಾ ಪ್ರಥಮ, ಮಿಡ್ಲೆ ರಿಲೇ ದ್ವಿತೀಯ, ಡಿಸ್ಕಸ್ ಎಸೆತದಲ್ಲಿ ಸೃಷ್ಟಿ ದ್ವಿತೀಯ, ಹ್ಯಾಮರ್ ಎಸೆತದಲ್ಲಿ ವೀಕ್ಷಾ ದ್ವಿತೀಯ, ಹೈಜಂಪ್‌ನಲ್ಲಿ ಸುಪ್ರಿಯಾ ಪ್ರಥಮ (ಹೊಸ ಕೂಟ ದಾಖಲೆ), ಟ್ರಿಪಲ್ ಜಂಪ್‌ನಲ್ಲಿ ಅಂಕಿತಾ ವಿಎಸ್. ದ್ವಿತೀಯ, 5000 ಮೀ. ನಡಿಗೆಯಲ್ಲಿ ಧನುಷಾ ದ್ವಿತೀಯ.
20 ವರ್ಷ ವಯೋಮಿತಿಯ ಬಾಲಕರ ವಿಭಾಗ
ಜಾವೆಲಿನ್ ಎಸೆತದಲ್ಲಿ ಮನು ಡಿಪಿ ಪ್ರತಮ (ಹೊಸ ಕೂಟ ದಾಖಲೆ. 66.33 ಮೀ), ಪೋಲ್‌ವಾಲ್ಟ್‌ನಲ್ಲಿ ಯೋಗೇಶ್ ತೃತೀಯ, 1500 ಮೀ. ಓಟದಲ್ಲಿ ಶಶಿಧರ್ ದ್ವಿತೀಯ, 800 ಮೀ. ಓಟದಲ್ಲಿ ಶಶಿಧರ್ ತೃತೀಯ, 1500 ಮೀ. ಓಟದಲ್ಲಿ ಪ್ರಶಾಂತ್ ತೃತೀಯ, 4*400 ಮೀ. ರಿಲೇ ಪ್ರದ್ಯುಮ್ನ, ಬೋಪಯ್ಯ, ಸಂತೋಷ್ ದ್ವಿತೀಯ, ಹ್ಯಾಮರ್ ಎಸೆತದಲ್ಲಿ ಯಮನೂರಪ್ಪ ಪ್ರಥಮ, 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಬಸವರಾಜ್ ತೃತೀಯ.
20 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ
2000ಮೀ. ಸ್ಟೀಪಲ್ ಚೇಸ್ ದೀಕ್ಷಾ ಪ್ರಥಮ, 1500 ಮೀ. ಓಟದಲ್ಲೂ ದ್ವಿತೀಯ, 10 ಕಿ.ಮೀ. ನಡಿಗೆಯಲ್ಲಿ ಅರ್ಪಿತಾ ದ್ವಿತೀಯ, 3000 ಮೀ. ಸ್ಟೀಪಲ್‌ಚೇಸ್ ಶಾಲಿನಿ ದ್ವಿತೀಯ, ಡಿಸ್ಕಸ್ ಎಸೆತದಲ್ಲಿ ಐಶ್ವರ್ಯ ದ್ವಿತೀಯ, 5000 ಮೀ. ಓಟದಲ್ಲಿ ಚೈತ್ರ ಪ್ರಥಮ, ಹ್ಯಾಮರ್ ಎಸೆತದಲ್ಲಿ ಅಮ್ರೀನ್ ದ್ವಿತೀಯ.