Friday, December 13, 2024

ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ತಂಡಗಳಿಗೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಮೈಸೂರಿನ ಚಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಪುರಷರ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೂಡಬಿದಿರೆಯ ಆಳ್ವಾಸ್ ಪುರುಷ ಹಾಗೂ ಮಹಿಳಾ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

ಲೀಗ್ ಹಾಗೂ ಸೂಪರ್ ಲೀಗ್ ಮಾದರಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್ ಪುರುಷರ ತಂಡ ತುಮಕೂರಿನ ಗಾಂಧೀ ನಗರ ಹಾಗೂ ಮೈಸೂರಿನ ತಂಡಗಳನ್ನು ನೇರ ಸೆಟ್‌ಗಳಿಂದ ಸೋಲಿಸಿ, ಫೈನಲ್ ಪಂದ್ಯದಲ್ಲಿ  ಬೆಂಗಳೂರಿನ ವಿಜಯ ನಗರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ೨೨-೩೫, ೩೫-೨೮, ೩೫-೨೯ ಅಂಕಗಳಿಂದ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಮಹಿಳೆಯರ ಸೂಪರ್ ಲೀಗ್ ಪಂದ್ಯದಲ್ಲಿ ಹಾಸನ ಪೈ ಹಾಗೂ ತುಮಕೂರಿನ ಎಸ್‌ಬಿಬಿಸಿ ತಂಡಗಳನ್ನು ನೇರ ಸೆಟ್‌ಗಳಿಂದ ಮಣಿಸಿ, ಅಂತಿಮ ಲೀಗ್ ಪಂದ್ಯದಲ್ಲಿ  ಬೆಂಗಳೂರಿನ ಜಯ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ೩೫-೨೧, ೨೩-೧೫, ಅಂಕಗಳ ಅಂತರದಲ್ಲಿ ಮಣಿಸಿ ಸುಲ‘ ಜಯದೊಂದಿಗೆ ಆಳ್ವಾಸ್ ಮಹಿಳಾ ತಂಡ ಪ್ರಶಸ್ತಿ ಗೆದ್ದುಕೊಂಡಿತು.
ಆಳ್ವಾಸ್ ಮಹಿಳಾ ತಂಡ ದಾಖಲೆ ಎಂಬಂತೆ ೧೩ನೇ ಬಾರಿ ರಾಜ್ಯ ದಸರಾ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಕಿರೀಟ ತನ್ನದಾಗಿಸಿಕೊಂಡಿದೆ

Related Articles