ಬೆಂಗಳೂರು: ಸಿಂಗಾಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಅನೀಶ್ ಗೌಡ 800 ಮೀ ಫ್ರೀಸ್ಟೈಲ್ ಹಾಗೂ 200ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮೊದಲ ದಿನಲ್ಲಿ ಚಿನ್ನದ ಖಾತೆ ತೆರೆದ ಅನೀಶ್, ಎರಡನೇ ದಿನದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಸಾಧನೆ ಮಾಡಿದ್ದಾರೆ. 200 ಮೀ ಇಂಡಿವಿಜ್ವಲ್ ಮೆಡ್ಲೆಯಲ್ಲಿ ಅನೀಶ್ ಬೆಳ್ಳಿಯ ಪದಕ ಗೆದ್ದಿದ್ದಾರೆ.
ಕರ್ನಾಟಕದ ಶ್ರೀಹರಿ ನಟರಾಜ್ 50 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ವನಿತೆಯರ ವಿಭಾಗದಲ್ಲಿ ಸುವನ ಸಿ ಭಾಸ್ಕರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ. 4×10೦ ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಶ್ರೀಹರಿ, ಆನಂದ್, ಆದಿತ್ಯ ಮತ್ತು ರಾಮ ರಾವ್ ಬೆಳ್ಳಿಯ ಸಾಧನೆ ಮಾಡಿದ್ದಾರೆ. ಮೊದಲ ದಿನದಲ್ಲಿ ಮಿಹಿರ್ ಆಮ್ರೆ 50 ಮೀ. ಬಟರ್ ಫ್ಲೈ ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿದರು.
18 ವರ್ಷದ ಅನೀಶ್ ಗೌಡ ಇತ್ತೀಚಿಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದು ಉತ್ತಮ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದರು.
PC: G.Rajaraman (Twitter)