ಬೆಂಗಳೂರು: ಜಗತ್ತಿನ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಚೆಸ್ ಒಲಂಪಿಯಾಡ್ ಕ್ರೀಡಾ ಜ್ಯೋತಿಯ ರಿಲೆಯು ಜುಲೈ 19ರಂದು ಮಂಗಳೂರಿಗೆ ಆಗಮಿಸಲಿದೆ. ಇದಕ್ಕೂ ಮುನ್ನ ಜುಲೈ 18ರಂದು ರಾಜಧಾನಿ ಬೆಂಗಳೂರಿಗೆ ಆಗಮಿಸಲಿದೆ.
28 ಜುಲೈಯಿಂದ 10 ಆಗಸ್ಟ್ ತನಕ ಮಹಾಬಲಿಪುರಂನಲ್ಲಿ ಚೆಸ್ ಒಲಂಪಿಯಾಡ್ ನಡೆಯಲಿದೆ.
ಚೆಸ್ ಒಲಂಪಿಯಾಡ್ ಇತಿಹಾಸಲ್ಲಿ ಇದುವರೆಗೂ ಕ್ರೀಡಾ ಜ್ಯೋತಿಯ ರಿಲೇ ನಡೆದಿರಲಿಲ್ಲ. ಚೆಸ್ ಕ್ರೀಡೆ ಹುಟ್ಟಿದ ಭಾರತದಲ್ಲಿ ಮೊದಲ ಬಾರಿಗೆ ಈ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸಲು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ತೀರ್ಮಾನಿಸಿದೆ.
ಮಂಗಳೂರಿನಿಂದ ಜ್ಯೋತಿಯ ಲಕ್ಷದ್ವೀಪ ಹಾಗೂ ಆ ನಂತರ ಕೇರಳದ ತ್ರಿಶೂರ್ ಹಾಗೂ ತಿರುವನಂತಪುರಕ್ಕೆ ಪ್ರಯಾಣಿಸಲಿದೆ.
ಈ ಬಾರಿ ಸಮಯದ ಅಭಾವದಿಂದ ಕ್ರೀಡಾ ಜ್ಯೋತಿಯು ಆತಿಥೇಯ ಭಾರತದಲ್ಲಿ ಮಾತ್ರ ಸಂಚರಿಸಲಿದ್ದು, ಮುಂದಿನ ಚೆಸ್ ಒಲಂಪಿಯಾಡ್‌ನಲ್ಲಿ ಜಗತ್ತಿನಾದ್ಯಂತ ಪ್ರಯಾಣಿಸಲಿದೆ.