ಪುಣೆ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೈ ಬೆರಳು ನೋವಿಗೆ ತುತ್ತಾಗಿದ್ದ ಬಾಂಗ್ಲಾದೇಶ ತಂಡದ ನಾಯಕ ಶಾಕೀಬ್ ಅಲ್ ಹಸನ್ ವಿಶ್ವಕಪ್‌ನ ಕೊನೆಯ ಪಂದ್ಯದಿಂದ ವಂಚಿತರಾಗಿದ್ದಾರೆ. ಆದರೆ ಶ್ರೀಲಂಕಾ ವಿರುದ್ಧದ ಪಂದ್ಯಲ್ಲಿ ನಡೆದ “ಟೈಮ್ಡ್ ಔಟ್” ಘಟನೆಯಿಂದ ಆಗುತ್ತಿರುವ ಮುಜುಗರವನ್ನು ತಪ್ಪಿಸಿಕೊಳ್ಳಲು ಮನೆಯ ಹಾದಿ ಹಿಡಿದಿರುವುದು ನಿಜ ಸಂಗತಿಯಾಗಿದೆ ಎಂಬುದು ಕ್ರಿಕೆಟ್ ಜಗತ್ತಿಗೆ ತಿಳಿದ ಸತ್ಯ ವಿಷಯ! Finger injury is reason but Shakib Al Hasan back to home to avoid embarrassment.
ತಂಡದ ಆಯ್ಕೆಯ ವಿಷಯದಲ್ಲೂ ಈಗ ವಿವಾದ ಎಬ್ಬಿದ್ದು ಒಟ್ಟಾರೆ ಇಲ್ಲಿಯ ಮಾಧ್ಯಮ ಹಾಗೂ ಹಿರಿಯ ಇತರ ಅಂತಾರಾಷ್ಟ್ರೀಯ ತಂಡಗಳ ಆಟಗಾರರೆದುರು ಆಗುತ್ತಿರುವ ಮುಜುಗರವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಯ ಬೆರಳು ನೋವಿನ ನೆಪವೊಡ್ಡಿದ್ದಾರೆಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆದಿದೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೈ ಬೆರಳಿಗೆ ಚೆಂಡು ತಗಲಿ ಗಾಯವಾಗಿತ್ತು. ಇದು ಕ್ರಿಕೆಟ್‌ನಲ್ಲಿ ಆಗುವ ಸಾಮಾನ್ಯ ನೋವು. ಗಂಭೀರವಾದ ಗಾಯವಾಗಿರುತ್ತದ್ದೆ ಶಾಕೀಬ್ ಬ್ಯಾಟಿಂಗ್‌ಗೆ ಇಳಿಯುತ್ತಿರಲಿಲ್ಲ. ನೋವು ನಿವಾರಕ ಮಾತ್ರೆ ತಿಂದು ಆಡಿದರಂತೆ. ನಿನ್ನೆ 120 ನಿಮಿಷಗಳ ಕಾಲ ಕ್ರೀಸಿನಲ್ಲಿದ್ದು, 82 ರನ್ ಗಳಿಸುವಾಗ ಕಾಣಿಸದ ಬೆರಳಿನ ನೋವು ಇಂದು ಇದ್ದಕ್ಕಿದ್ದಂತೆ ಉಲ್ಬಣಿಸಿರುವುದು ವಿಶೇಷ.
ಮುಂದಿನ ಪಂದ್ಯಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇದೆ. ಅಷ್ಟರಲ್ಲೇ ಕೈ ಬೆರಳು ಗುಣವಾಗುತ್ತಿತ್ತು. ಆದರೆ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಶಾಕೀಬ್‌ಗೆ ಈಗ ಅದನ್ನು ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ. “ಯುದ್ಧ ಕಾಲದಲ್ಲಿ ಏನು ಮಾಡಬೇಕೋ ಅದನ್ನು ಮಾಡಿರುವೆ,” ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿರುವ ಶಾಕೀಬ್ ಈಗ ಯುದ್ಧ ಕಾಲದಲ್ಲಿ ಸೋಲುವ ತಂಡವು ಮಾಡುವ ಕೆಲಸವನ್ನು ಮಾಡಿದ್ದಾರೆ.