Sunday, May 26, 2024

ಚಾಂಪಿಯನ್ ಅಥ್ಲಿಟ್ ನೇಣು ಬಿಗಿದು ಆತ್ಮಹತ್ಯೆ

ದೆಹಲಿ:

ಅಂತಾರಾಷ್ಟ್ರೀಯ ಮಟ್ಟದ 18ರ ಪ್ರಾಯದ ಬಾರತದ ಅಥ್ಲಿಟ್ ಪರ್ವಿಂದರ್ ಸಿಂಗ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಜವಹಾರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಈ ಪ್ರಕರಣವನ್ನು ತನೆಖೆಗೆ ವಹಿಸಿದೆ. ಕಳೆದ ವರ್ಷ ಪರ್ವಿಂದರ್ ಯೂಥ್ ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದಿದ್ದರು.

ಕ್ರೀಡಾಂಗಣದ ಹಾಸ್ಟೆಲ್ ನ ಕೊಠಡಿಯ ಫ್ಯಾನ್ ಗೆ ಪರ್ವಿಂದರ್ ಚೌಧರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಸಹ ಕ್ರೀಡಾಪಟುಗಳು ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಕ್ರೀಡಾ ಇಲಾಖೆಯೊಳಗೆ ತನಿಖೆ ಮಾಡುವಂತೆ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ನೀಲಂ ಕಪೂರ್ ಅವರು ಸೂಚಿಸಿದ್ದಾರೆ.
 ಹಣದ ವಿಷಯದಲ್ಲಿ ತಂದೆಯೊಂದಿಗೆ ಪರ್ವಿಂದರ್ ಮಾತಿನ ಚಕಮಕಿ ನಡೆಸಿದ್ದ. 100 ಮತ್ತು 200 ಮೀ ಓಟದಲ್ಲಿ ತರಬೇತಿ ಪಡೆಯುತ್ತಿದ್ದ ಕ್ರೀಡಾಪಟು ಬೆಳಿಗ್ಗೆಯಿಂದ ಒತ್ತಡಕ್ಕೆ ಸಿಲುಕಿದಂತೆ ಕಂಡುಬಂದಿದ್ದ. ತಂದೆಯೊಂದಿಗೆ ಜಗಳವಾಡಿದ್ದನ್ನು ಗಮನಿಸಿ ಪರ್ವಿಂದರ್ ಸಹೋದರಿ ಸಂಜೆ ಹಾಸ್ಟೆಲ್ ಗೆ ಬಂದು ಮಾತುಕತೆ ನಡೆಸಿದ್ದಳು. ಆದರೆ ಸಹೋದರಿಯ ಸಮ್ಮುಖದಲ್ಲೇ ಆತ ಈ ತೀರ್ಮಾನಕ್ಕೆ ಬಂದುಬಿಟ್ಟ.

Related Articles