Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಖೋ ಖೋ ವಿಶ್ವಕಪ್‌ 2025: ಸೆಮಿಫೈನಲ್‌ಗೆ ಭಾರತ ಮಹಿಳಾ ತಂಡ

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿಶುಕ್ರವಾರ ನಡೆದ 2025ರ ಖೋ ಖೋ ವಿಶ್ವಕಪ್‌ ಟೂರ್ನಿಯಲ್ಲಿಭಾರತ ಮಹಿಳಾ ತಂಡವು ಬಾಂಗ್ಲಾದೇಶ ವಿರುದ್ಧ 109-16 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ. Ruthless India Storms into Kho Kho World Cup 2025 Semi-finals with Bangladesh Blowout.

ನಾಯಕಿ ಪ್ರಿಯಾಂಕಾ ಇಂಗಳೆ ನೇತೃತ್ವದ ತಂಡವು ಎರಡನೇ ಅವಧಿಯಲ್ಲಿಐದು ನಿಮಿಷಗಳ ಕಾಲ ನಡೆದ ಆಕರ್ಷಕ ಡ್ರೀಮ್‌ ರನ್‌ ಸೇರಿದಂತೆ ಎಲ್ಲಾ ನಾಲ್ಕು ಅವಧಿಗಳಲ್ಲಿತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿತು.ಇದರೊಂದಿಗೆ ಆತಿಥೇಯ ತಂಡವು 100ಕ್ಕೂ  ಅಧಿಕ ಅಂಕಗಳನ್ನು ಗಳಿಸುವ ಗಮನಾರ್ಹ ಪ್ರದರ್ಶನವನ್ನು ಮುಂದುವರಿಸಿದೆ. ಇದು ಪಂದ್ಯಾವಳಿಯಲ್ಲಿಅಂಕಗಳ ಶತಕದ ಗಡಿಯನ್ನು ದಾಟಿದ ಸತತ ಐದನೇ ಪಂದ್ಯವಾಗಿದೆ.

ಈ ಗೆಲುವಿನೊಂದಿಗೆ ಜ.18ರ ಶನಿವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯಕ್ಕೆ ಭಾರತ ವೇದಿಕೆ ಸಿದ್ದಪಡಿಸಿಕೊಂಡಿದೆ.ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್‌  ಫೈನಲ್‌ ಪಂದ್ಯದಲ್ಲಿನಸ್ರೀನ್‌ ಶೇಖ್‌ ಮತ್ತು ಪ್ರಿಯಾಂಕಾ ಇಂಗಳೆ ನೆರವಿನಿಂದ ಭಾರತ ತಂಡ ಅತ್ಯುತ್ತಮ ಪ್ರದರ್ಶನ ತೋರಿತು. ತಮ್ಮ ಸರದಿಯ ಆರಂಭದಿಂದಲೂ ಡ್ರೀಮ್‌ ರನ್‌ ಮೂಲಕ ಅಂಕಗಳನ್ನು ಗಳಿಸಿದ್ದರಿಂದ ಅವರು 2ನೇ ಅವಧಿಯಲ್ಲೂಬಾಂಗ್ಲಾದೇಶಿಗಳನ್ನು ನೆಲೆಗೊಳ್ಳಲು ಬಿಡಲಿಲ್ಲ.

ಮತ್ತೊಮ್ಮೆ, ನಾಯಕಿ ಪ್ರಿಯಾಂಕಾ ಇಂಗಳೆ, ಅಶ್ವಿನಿ ಶಿಂಧೆ ಮತ್ತು ರೇಷ್ಮಾ ರಾಥೋಡ್‌ ಜತೆ ಮಿಂಚಿದರು. 5 ನಿಮಿಷ 36 ಸೆಕೆಂಡುಗಳ ಕಾಲ ಮೈದಾನದಲ್ಲಿದ್ದ ಈ ಬ್ಯಾಚ್‌ 6 ಅಂಕಗಳನ್ನು ಗಳಿಸಿ ಗಣನೀಯ ಮುನ್ನಡೆಗೆ ಕಾರಣವಾಯಿತು. 2ನೇ ಅವಧಿಯ ಅಂತ್ಯಕ್ಕೆ ಬಾಂಗ್ಲಾದೇಶ ಕೇವಲ ನಾಲ್ಕು ಟಚ್‌ ಪಾಯಿಂಟ್ಸ್‌ ಗಳಿಸಲು ಶಕ್ತವಾಯಿತು. ಹೀಗಾಗಿ ಭಾರತದ ಮುನ್ನಡೆ 56-8 ಅಂಕಗಳಿಗೆ ವಿಸ್ತರಣೆಗೊಂಡಿತು.

3ನೇ ಅವಧಿಯಲ್ಲಿಬಾಂಗ್ಲಾದೇಶಕ್ಕೆ ಆಟಕ್ಕೆ ಹೊಂದಿಕೊಳ್ಳಲು ಅವಕಾಶ ನೀಡದ ಕಾರಣ ಭಾರತೀಯರು  ಮತ್ತೊಮ್ಮೆ ಮೇಲುಗೈ ಸಾಧಿಸಿದರು. 2025ರ ಖೋ ಖೋ ವಿಶ್ವಕಪ್‌ನಲ್ಲಿಸ್ಕೈ ಡೇವ್‌ ಖ್ಯಾತಿಯ ರೇಷ್ಮಾ ರಾಥೋಡ್‌ ಸತತ ಐದನೇ ಬಾರಿಗೆ ತಂಡ 100 ಅಂಕಗಳನ್ನು ಗಳಿಸಲು ನೆರವಾದರು. 3ನೇ ಅವಧಿಯ ಅಂತ್ಯಕ್ಕೆ ಕ್ವಾರ್ಟರ್‌ ಫೈನಲ್‌ ಪಂದ್ಯದ ಭಾರತದ ಸ್ಕೋರ್‌ 106-8 ಆಗಿತ್ತು.

ನಾಲ್ಕನೇ ಅವಧಿಯಲ್ಲಿ ಪಂದ್ಯವು ಮತ್ತೊಮ್ಮೆ ಏಕಪಕ್ಷೀಯವಾಗಿತ್ತು. ಇದು ಮೂರು ಅಂಕಗಳ ಡ್ರೀಮ್‌ ರನ್‌ಗೆ  ಕಾರಣವಾಯಿತು. ಇದರೊಂದಿಗೆ ಆತಿಥೇಯ ತಂಡವು 109-16 ಅಂಕಗಳಿಂದ ಮುನ್ನಡೆ ಸಾಧಿಸಿತು.ಈ ಜಯದೊಂದಿಗೆ ಜನವರಿ 18ರ ಶನಿವಾರ ನಡೆಯಲಿರುವ ಮತ್ತೊಂದು ರೋಚಕ ಸೆಮಿಫೈನಲ್‌ ಪಂದ್ಯಕ್ಕೆ ಭಾರತ ಸಜ್ಜುಗೊಂಡಿತು.

ಪಂದ್ಯ ಪ್ರಶಸ್ತಿಗಳು

ಪಂದ್ಯದ ಅತ್ಯುತ್ತಮ ಅಟ್ಯಾಕರ್‌: ಮಗೈ ಮಾಝಿ

ಅತ್ಯುತ್ತಮ ಡಿಫೆಂಡರ್‌: ರಿತು ರಾಣಿ ಸೇನ್‌

ಪಂದ್ಯ ಶ್ರೇಷ್ಠ: ಅಶ್ವನಿ ಶಿಂಧೆ

ಮಹಿಳಾ ವಿಭಾಗದ ಕ್ವಾರ್ಟರ್‌ ಫೈನಲ್‌ ಫಲಿತಾಂಶ:

ಮಹಿಳಾ ವಿಭಾಗದಲ್ಲಿ, ಉಗಾಂಡಾ ನ್ಯೂಜಿಲೆಂಡ್‌ ವಿರುದ್ಧ ನಿರ್ಣಾಯಕ ಗೆಲುವಿನೊಂದಿಗೆ ಗಮನಾರ್ಹ ಪರಾಕ್ರಮವನ್ನು ಪ್ರದರ್ಶಿಸಿತು. ಅಂತಿಮ ಸ್ಕೋರ್‌ 71-26 ಅಂಕಗಳೊಂದಿಗೆ ಸೆಮಿಫೈನಲ್‌ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಕೀನ್ಯಾ ವಿರುದ್ಧ ನಡೆದ ಪಂದ್ಯದಲ್ಲಿದಕ್ಷಿಣ ಆಫ್ರಿಕಾ 51-46 ಅಂಕಗಳಿಂದ ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿತು. ಇರಾನ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿನೇಪಾಳ 103-8 ಅಂಕಗಳಿಂದ ಮೇಲುಗೈ ಸಾಧಿಸಿತು.

ಪುರುಷರ ವಿಭಾಗದ ಕ್ವಾರ್ಟರ್‌ ಫೈನಲ್‌ ಫಲಿತಾಂಶ:

ಪುರುಷರ ವಿಭಾಗದಲ್ಲಿಇರಾನ್‌ ತಂಡವು ಕೀನ್ಯಾ ವಿರುದ್ಧ 86-18 ಅಂಕಗಳ ಅಂತರದಲ್ಲಿಜಯ ಸಾಧಿಸಿತು.

ನಿರ್ಣಾಯಕ ಪಂದ್ಯದಲ್ಲಿದಕ್ಷಿಣ ಆಫ್ರಿಕಾ 58-38 ಅಂಕಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಸೆಮಿಫೈನಲ್‌ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಬಾಂಗ್ಲಾದೇಶ ವಿರುದ್ಧ 67-18 ಅಂಕಗಳ ಭರ್ಜರಿ ಜಯ ದಾಖಲಿಸಿದ ನೇಪಾಳ ಸೆಮಿಫೈನಲ್‌ ಪ್ರವೇಶಿಸಿತು


administrator