Saturday, October 5, 2024

ಕ್ವಿಂಟನ್‌ ಡಿ ಕಾಕ್‌ ನಿಮ್ಮ ನಿವೃತ್ತಿಗೆ ಇದು ಕಾಲವಲ್ಲ!

ಪ್ರದೀಪ್‌ ಪಡುಕರೆ, Pradeep Padukare

ಕ್ವಿಂಟನ್ ಡಿ ಕಾಕ್ ಹರಿಣಗಳ ತಂಡದ ಮಗು ಮುಖದ ಕಲಾತ್ಮಕ ಹಾಗೂ ಸ್ಟೈಲೀಶ್ ಎಡಗೈ ಆರಂಭಿಕ ಆಟಗಾರ.

ತನ್ನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಕೇವಲ ಹತ್ತೊಂಬತ್ತನೆಯ ವಯಸ್ಸಿಗೆ ದಕ್ಷಿಣ ಆಪ್ರಿಕಾ ತಂಡಕ್ಕೆ ಆಯ್ಕೆಯಾದ ಸಾಹಸಿ. ಆದರೆ ಅವರ ನಿವೃತ್ತಿಗೆ ಇದು ಕಾಲವಲ್ಲ. Quinton de Kock this not right time to retire

ತಾನಾಡಿದ ಎರಡನೇ ಏಕದಿನ ಸರಣಿಯಲ್ಲಿ ಬಲಿಷ್ಠ ಭಾರತ ವಿರುಧ್ದ ಹ್ಯಾಟ್ರಿಕ್ ಶತಕ ಹೊಡೆದ ಬ್ಯಾಟಿಂಗ್ ಮಾಂತ್ರಿಕ. ಆ ಕಾಲದಲ್ಲಿ ಜಹೀರ್ ಅಬ್ಬಾಸ್, ಸಯೀದ್ ಅನ್ವರ್, ಹರ್ಷಲ್ ಗಿಬ್ಸ್ ಹಾಗೂ ಎ.ಬಿ. ಡಿವಿಲಿಯರ್ಸ್ ಮಾತ್ರ ಈ ಹಿಂದೆ ಏಕದಿನದಲ್ಲಿ ಹ್ಯಾಟ್ರಿಕ್ ಶತಕ ಸಾಧನೆ ಮಾಡಿದ್ದರು. ಜೊತೆಗೆ ಕೇವಲ ಇಪ್ಪತೊಂದನೇಯ ಇನ್ನಿಂಗ್ಸ್‌ನಲ್ಲಿ ಒಂದು ಸಾವಿರ ರನ್ ಬಾರಿಸಿ ವಿವ್ ರಿಚಾರ್ಡ್ಸ್, ಕೆವಿನ್ ಪೀಟರ್ಸನ್, ಜಾನಥನ್ ಟ್ರಾಟ್ ಹೆಸರಲ್ಲಿದ್ದ ವಿಶ್ವ ದಾಖಲೆ ಸರಿಗಟ್ಟಿದ ದಾಂಡಿಗ.

ಕೇವಲ 74 ಇನ್ನಿಂಗ್ಸ್‌ನಲ್ಲಿ ಹನ್ನೆರಡು ಶತಕ ಸಿಡಿಸಿದ ಮತ್ತೊಂದು ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡ ಸೌತ್ ಆಪ್ರೀಕಾದ ಸೆನ್ಸೇಶನ್ ಕ್ವಿಂಟನ್ ಡಿ ಕೊಕ್.ಈಗಲು ಸಹ ಏಕದಿನ ರ್ಯಾಂಕಿಂಗ್‌ನಲ್ಲಿ ಟಾಪ್ ಹತ್ತರಲ್ಲಿ ಇರುವ, ಕಳೆದ ಹತ್ತು ವರ್ಷಗಳಿಂದಲು ಬ್ಯಾಟಿಂಗ್ ಸ್ಥಿರತೆ ಕಾಯ್ದುಕೊಂಡ ಬಂದಿರುವ ಬ್ಯಾಟ್ಸ್‌ಮನ್.

ಲಿಮಿಟೆಡ್ ಓವರ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿ ಶಾಕ್ ಕೊಟ್ಟ ಕಾಕ್..!

ಹೌದು ತಾನು ಭರ್ಜರಿ ಫಾರ್ಮಲ್ಲಿರುವಾಗ ಡಿ ಕಾಕ್ ದಿಡಿರ್ ನಿವೃತ್ತಿ ಘೋಷಿಸಿದ್ದು ಕ್ರಿಕೆಟ್ ಜಗತ್ತಿಗೆ ಆಶ್ಚರ್ಯವಾಗಿತ್ತು. ಒಬ್ಬರ ಬೆನ್ನಿಗೆ ಒಬ್ಬರಂತೆ  ಎಬಿಡಿ, ಡುಪ್ಲೇಸಿ, ಡುಮಿನಿ, ಸ್ಟೇನ್ ನಿವೃತ್ತಿ ನಂತರ ದಕ್ಷಿಣ ಆಪ್ರೀಕಾಕ್ಕೆ ಡಿಕಾಕ್ ವಿದಾಯ ಗಾಯದ ಮೇಲೆ ಬರೆ ಎಳೆದಂತಾಯಿತು. ಅಷ್ಟಕ್ಕು ಡಿ‌ಕಾಕ್ ಗೆ ಇನ್ನೂ ಮೂವತ್ತರ ಪ್ರಾಯ.

ಹೀಗೆ ವಿಶ್ವ‌ಕಪ್ ತನ್ನ ಕೊನೆಯ ವಿದಾಯ ಸರಣಿ ಎಂದು ಅನೌಂಸ್ ಮಾಡಿದ ಕ್ವಿಂಟನ್ ಭಾರತದಲ್ಲಿ ನಡೆಯುತ್ತಿರುವ ಈ ವಿಶ್ವಕಪ್ಪಿನಲ್ಲಿ ಹಿಂದೆಂದಿಗಿಂತಲೂ ಭಯಂಕರ ಫಾರ್ಮಿನಲ್ಲಿದ್ದಾರೆ‌. ಆಡಿರುವ ಆರು ಪಂದ್ಯಗಳಲ್ಲಿ ಮೂರು ಭರ್ಜರಿ ಶತಕ ಬಾರಿಸಿದ್ದಾರೆ. ಇಂದು ಬಾಂಗ್ಲಾ ಮೇಲೆ ನೂರ ಎಪ್ಪತ್ತು ಚಿಲ್ಲರೆ ಬಡಿದು ಬಾಂಗ್ಲಾದ ಬೆವರಳಿಸಿದ್ದಾರೆ.

ಇದು ಕೇವಲ150 ನೇ ಏಕದಿನ ಪಂದ್ಯದಲ್ಲಿ ಅವರ  ಇಪ್ಪತ್ತನೇ ಶತಕ. ಮೂವತ್ತು ಅರ್ಧಶತಕ ಸೇರಿ ಅವರ ಬ್ಯಾಟಿಂಗ್ ಸರಾಸರಿ 46ಕ್ಕೂ ಹೆಚ್ಚು, ಇಂತ ಎವರೇಜ್ ಟಾಪ್ ಪ್ಲೇಯರ್ಸ್‌ಗಳಿಗೆ ಮಾತ್ರ ಇರಲು ಸಾಧ್ಯ.ಕೆಲವರು debut ಮಾಡುವ ವಯಸ್ಸಲ್ಲಿ ಡಿಕಾಕ್ ‌ನಿವೃತ್ತಿ ನಿರ್ಧಾರ ಯೋಚಿಸಿಬೇಕಾದದ್ದು.  ಇನ್ನು ಐದಾರು ವರ್ಷಗಳ ಕ್ವಾಲಿಟಿ ಕ್ರಿಕೆಟ್ ಅವರಲ್ಲಿ ಬಾಕಿ ಇದೆ.

ಯಾವುದೋ ವೈಯಕ್ತಿಕ ಕಾರಣಕ್ಕೊ, ತರಾತುರಿಯಲ್ಲೊ ಅವರು ತೆಗದುಕೊಂಡಿರುವ ನಿವೃತ್ತಿ ಹಿಂಪಡೆದು‌ ವಿಶ್ವಕಪ್ ನಂತರವು ಹರಣಿಗಳ ಪರ ಬ್ಯಾಟ್ ಬೀಸಬೇಕು ಎಂಬು‌ದು ಕೇವಲ ಸೌತ್ ಆಫ್ರಿಕಾ ಅಭಿಮಾನಿಗಳ ಹಂಬಲವಲ್ಲ ಪ್ರತಿ‌ ಕ್ರಿಕೆಟ್ ಪ್ರೇಮಿಯ ಆಶಯ.

Related Articles