Friday, December 13, 2024

ಪಾಕ್‌ 11 ಆಟಗಾರರಿಗೆ ದಿನಕ್ಕೆ 8 ಕೆಜಿ ಮಟನ್‌!

ಚೆನ್ನೈ:  ಪಾಕಿಸ್ತಾನ ಕ್ರಿಕೆಟ್‌ ತಂಡ ಅಫಘಾನಿಸ್ತಾನದ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಅತ್ಯಂತ ಹೀನಾಯವಾಗಿ ಸೋತು ಜಗತ್ತಿನಾದ್ಯಂತ ಟೀಕೆಗೆ ಗುರಿಯಾಗಿದೆ. ತಂಡದ ಮಾಜಿ ನಾಯಕ ವಾಸಿಂ ಅಕ್ರಂ ತಂಡದ ಸೋಲಿಗೆ ಫಿಟ್ನೆಸ್‌ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ. ಪಾಕಿಸ್ತಾನದ ಆಟಗಾರರು ದಿನಕ್ಕೆ 8 ಕೆಜಿ ಮಟನ್‌ ತಿಂದರೆ ಫಿಟ್ನೆಸ್‌ ಎಲ್ಲಿರುತ್ತೆ? ಎಂದು ಪ್ರಶ್ನಿಸಿದ್ದಾರೆ. Pakistan players eating 8 kg of mutton everyday

ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರರ ಫಿಟ್ನೆಸ್‌ ಪರೀಕ್ಷೆ ಕಳೆದ ಎರಡು ವರ್ಷಗಳಿಂದ ನಡೆಯಲೇ ಇಲ್ಲ, ಕಳೆದ ಮೂರು ವಾರಗಳಿಂದ ಈ ಬಗ್ಗೆ ಕೂಗಿ ಹೇಳುತ್ತಿದ್ದರೂ ಯಾರೂ ಗಮನಿಸುತ್ತಿಲ್ಲ ಎಂದು 1992 ವಿಶ್ವಕಪ್‌ ವಿಜೇತ ತಂಡ ಹಾಗೂ 1999ರಲ್ಲಿ ಫೈನಲ್‌ ತಲುಪಿರುವ ತಂಡದ ಸದಸ್ಯ ವಾಸಿಂ ಅಕ್ರಂ ಸದ್ಯದ ಪಾಕಿಸ್ತಾನ ತಂಡದ ಫಿಟ್ನೆಸ್‌ ಬಗ್ಗೆ ವ್ಯಂಗ್ಯವಾಡಿದ್ದಾರೆ.

“ಪಾಕಿಸ್ತಾನದ ಆಟ ನೋಡಿ ಬಹಳ ಮುಜುಗರವೆನಿಸಿತು, 280ರನ್‌ ಗುರಿಯನ್ನು ಕೇವಲ 2 ವಿಕೆಟ್‌ ಕಳೆದುಕೊಂಡು ಅಫಘಾನಿಸ್ತಾನ ಗುರಿ ತಲುಪಿತು. ಕಳೆದ ಮೂರು ವಾರಗಳಿಂದ ನಾನು ಕೂಗುತ್ತಿದ್ದೇವೆ,. ಪಾಕಿಸ್ತಾನ ಕ್ರಿಕೆಟ್‌ ತಂಡ ಕಳೆದ ಎರಡು ವರ್ಷಗಳಿಂದ ಫಿಟ್ನೆಸ್‌ ಪರೀಕ್ಷೆ ನಡೆಸಿಲ್ಲ. ನಾನು ಇಲ್ಲಿ ಕೆಲವರ ಹೆಸರುಗಳನ್ನು ತೆಗೆದುಕೊಂಡರೆ ಅವರು ತಲೆ ತಗ್ಗಿಸಬೇಕಾಗುತ್ತದೆ. ದಿನಕ್ಕೆ 8 ಕೆಜಿ ಮಟನ್‌ ತಿನ್ನುವ ಇವರನ್ನು ಪರೀಕ್ಷೆ ಮಾಡಬೇಕೋ ಬೇಡವೋ?” ಎಂದು ವಾಸಿಂ ಅಕ್ರಂ ಪ್ರಶ್ನಿಸಿದ್ದಾರೆ.

ದೇಶಕ್ಕಾಗಿ ಆಡಲು ಹಣ ಕೊಡುತ್ತೇವೆ:

ನಿಮ್ಮ ದೇಶಕ್ಕಾಗಿ ನೀವು ಸುಮ್ಮನೇ ಆಡುತ್ತಿಲ್ಲ. ಅದಕ್ಕೆ ಹಣ ನೀಡಲಾಗುತ್ತದೆ. ಅದಕ್ಕೊಂದು ಕ್ರಮ ಎಂಬುದು ಇರುತ್ತದೆ. ಮಿಸ್ಬಾ ಕೋಚ್‌ ಆಗಿದ್ದಾಗ ಆ ಕ್ರಮ ಇದ್ದಿತ್ತು. ಆಟಗಾರರು ಅವರನ್ನು ಟೀಕಿಸುತ್ತಿದ್ದರು. ಆದರೆ ಅವರು ಅನುಸರಿಸಿದ ಕ್ರಮ ಯಶಸ್ಸು ಕಂಡಿತ್ತು. ಈಗ ನಾವು ಅವರು ಸೋಲಲಿ, ಇವರು ಗೆಲ್ಲಲಿ ಎಂಬ ಸ್ಥಿತಿ ತಲುಪಿದ್ದೇವೆ,” ಎಂದು ಅಕ್ರಂ ಬಹಳ ಬೇಸರದಲ್ಲಿ ನುಡಿದರು.

Related Articles