Wednesday, November 6, 2024

ಯೋಧಾಗೆ ತಲೆಬಾಗಿದ ಯು ಮುಂಬಾ

ಸ್ಪೋರ್ಟ್ಸ್ ಮೇಲ್ ವರದಿ

ಪ್ರೊ ಕಬಡ್ಡಿ ಲೀಗ್ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಯುಪಿ ಯೋಧಾ ತಂಡ ಯು ಮುಂಬಾ ವಿರುದ್ಧ 34-29 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ.

ಯುಪಿ ಯೋಧಾ  ಪಡೆ ಆಲ್ರೌಂಡ್ ಪ್ರದರ್ಶನ ತೋರಿ ಯು ಮುಂಬಾ ಪಡೆಗೆ ಆಘಾತ ನೀಡಿತು. ಪಂದ್ಯದೂದ್ದಕ್ಕೂ ಯುಪಿ ಯೋಧಾ ಪಡೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಯಿತು. ಕೊಚ್ಚಿಗೆ ಮೊದಲ ಬಾರಿಗೆ ಕಾಲಿಟ್ಟ ಪಿಕೆಎಲ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಡಿಫೆನ್ಸ್ ವಿಭಾಗದಲ್ಲಿ ಮಿಂಚಿದ ನಿತೇಶ್ ಕುಮಾರ್ 8 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಡಿಫೆನ್ಸ್‌ನಲ್ಲಿ ಯುಪಿ ಪಡೆ ಒಟ್ಟು 18 ಅಂಕಗಳನ್ನು ಗಳಿಸಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದ್ದು ವಿಶೇಷ. ಯು ಮುಂಬಾ ರೈಡರ್ ಸಿದ್ಧಾರ್ಥ್ ದೇಸಾಯಿ ಇಲ್ಲಿ ಯಶಸ್ಸು ಕಾಣುವಲ್ಲಿ ವಿಲರಾಗಿ ಕೇವಲ ಏಳು ಅಂಕಗಳನ್ನು ಗಳಿಸಿದರು. ಶ್ರೀಕಾಂತ್ ಜಾದವ್ ಹಾಗೂ ಪ್ರಶಾಂತ್ ಕುಮಾರ್ ರೈ ಒಂದಾಗಿ ಒಟ್ಟು ಒಂಬತ್ತು ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಕ ಪಾತ್ರವಹಿಸಿದರು.
ಆರಂಭದಲ್ಲಿ ಇತ್ತಂಡಗಳು ಸಮಬಲದ ಹೋರಾಟ ನೀಡಿದವು. ಶ್ರೀಕಾಂತ್ ಜಾಧವ್ ಹಾಗೂ ಸಿದ್ಧಾರ್ಥ ದೇಸಾಯಿ ತಮ್ಮ ತಂಡಗಳು ಅಗತ್ಯವಿರುವ ರೈಡ್ ಅಂಕಗಳನ್ನು ನೀಡಿದರರು. ಮೊದಲ ಐದು ನಿಮಿಷಗಳ ಪಂದ್ಯದಲ್ಲಿ ಇತ್ತಂಡಗಳು 5-5 ರಲ್ಲಿ ಸಮಬಲ ಸಾಧಿಸಿದವು. ಆದರೆ ಆ ನಂತರದ ಹೋರಾಟದಲ್ಲಿ ಯೋಧಾ ಪಡೆ ಮೇಲುಗೈ ಸಾಧಿಸಿತು. ಮೊದಲಾರ್ಧದಲ್ಲಿ ಪಂದ್ಯ 18-15ರಲ್ಲಿ ಸಾಗಿತು.
ದ್ವಿತಿಯಾರ್ಧದಲ್ಲೂ ಮೇಲುಗೈ ಸಾಧಿಸಿದ ಯೋದಾ 27ನೇ ನಿಮಿಷದಲ್ಲಿ 25-18 ಅಂತರದಲ್ಲಿ ಮುನ್ನಡೆಯಿತು. ಜೀವ ಕುಮಾರ್ ಹಾಗೂ ನಿತೇಶ್ ಕುಮಾರ್ ಎದುರಾಳಿಗೆ ಹೆಚ್ಚು ಅಂಕ ನೀಡದಂತೆ ನೋಡಿಕೊಂಡರು. ನಿರ್ಣಾಯಕ ಹಂತದಲ್ಲಿ ರೋಶನ್ ದೇವಾಡಿಗ ಹಾಗೂ ಪ್ರಶಾಂತ್ ಕುಮಾರ್ ರೈ ಅಗತ್ಯವಿರುವ ಅಂಕಗಳನ್ನು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

Related Articles