Saturday, July 27, 2024

ಅಕ್ಟೋಬರ್ 5 ರಿಂದ ಪ್ರೊ ಕಬಡ್ಡಿ

ಸ್ಪೋರ್ಟ್ಸ್ ಮೇಲ್ ವರದಿ 

ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ ೫ರಂದು ಚೆನ್ನೈನಲ್ಲಿ ಆರಂಭಗೊಂಡು ಜನವರಿ ೫, ೨೦೧೯ರಂದು ಮುಂಬೈಯಲ್ಲಿ ಕೊನೆಗೊಳ್ಳಲಿದೆ. ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ಸ್ಟಾರ್ ಸ್ಪೋರ್ಟ್ಸ್ ಹಾಗೂ ಹಾಟ್‌ಸ್ಟಾರ್‌ಗಳಲ್ಲಿ ವೀಕ್ಷಿಸಬಹುದು.

ಪ್ರೊಕಬಡ್ಡಿ ಲೀಗ್‌ನ ಹಕ್ಕನ್ನು ಹೊಂದಿರುವ ಹಾಗೂ ಸಂಘಟಕರಾಗಿರುವ ಮಷಾಲ್ ಸ್ಪೋರ್ಟ್ಸ್ ಪ್ರೊ ಕಬಡ್ಡಿ ಲೀಗ್‌ನ ಆರನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಬಾರಿ ದೇಶದ ೧೩ ನಗರಗಳಲ್ಲಿ ಚಾಂಪಿಯನ್‌ಷಿಪ್‌ನ ಪಂದ್ಯಗಳು ನಡೆಯಲಿವೆ. ಆರಂಭ  ಚೆನ್ನೈ ನಲ್ಲಿ  ನಡೆದರೆ ಫೈನಲ್ ಆತಿಥ್ಯ ಮುಂಬೈ ವಹಿಸಲಿದೆ.
ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ತಮಿಳ್ ತಲೈವಾಸ್ ಸೆಣಸಲಿವೆ. ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಯು ಮುಂಬಾ ನಡುವೆ ನಡೆಯಲಿದೆ. ಐದು ಆವೃತ್ತಿಗಳಲ್ಲಿ ಮುಂಬೈ ಪರ ಆಡಿದ್ದ ಅನೂಪ್ ಕುಮಾರ್ ಈ ಬಾರಿ ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಆಡಲಿದ್ದಾರೆ.
ಪ್ರಮುಖ ಪಂದ್ಯಗಳಲ್ಲಿ ತಮಿಳು ತಲೈವಾಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಲಿವೆ. ಡುಬ್ಕಿ ಕಿಂಗ್ ಎಂದೇ ಖ್ಯಾತಿ ಪಡೆದು ಕಳೆದ ಬಾರಿ ೩೬೯ ಅಂಕಗಳನ್ನು ಗಳಿಸಿರುವ ಪ್ರದೀಪ್ ನರ್ವಾಲ್ ಪ್ರಮುಖ ಆಕರ್ಷಣೆ. ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿರುವ ಮನು ಗೋಯಟ್ ಅವರ ಹರಿಯಾಣ ಸ್ಟೀಲರ್ಸ್ ಹಾಗೂ ಪುಣೇರಿ ಪಲ್ಟನ್ ಮೊದಲ ವಾರದಲ್ಲಿ ಸೆಣಸಲಿವೆ.
’ಏಷ್ಯನ್ ಗೇಮ್ಸ್ ಇರುವ ಕಾರಣ ನಾವು ಈ ಬಾರಿ ಆವೃತ್ತಿಯನ್ನು ಅಕ್ಟೋಬರ್‌ನಲ್ಲಿ ಆರಂಭಿಸುತ್ತಿದ್ದೇವೆ. ಪ್ರಮುಖ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವುದರಿಂದ ಅವರ ಲಭ್ಯತೆಗಾಗಿ ಕಾಯುತ್ತಿದ್ದೇವೆ. ಜುಲೈ ತಿಂಗಳಲ್ಲಿ ಪ್ರೊ ಕಬಡ್ಡಿ ಏಳನೇ ಆವೃತ್ತಿ ಆರಭಗೊಳ್ಳಲಿದೆ,’ ಎಂದು ಪ್ರೊ ಕಬಡ್ಡಿ ಲೀಗ್‌ನ ಕಮಿಷನರ್‌ಅನುಪಮ್ ಗೋಸ್ವಾಮಿ ಹೇಳಿದ್ದಾರೆ.
೧೨ ತಂಡಗಳನ್ನು ಆರು ತಂಡಗಳ ಎರಡು ವಲಯಗಳನ್ನಾಗಿ ವಿಂಗಡಿಸಲಾಗಿದೆ. ವಲಯ ಹಂತದಲ್ಲಿ ತಂಡಗಳು ೧೫ ಪಂದ್ಯಗಳನ್ನು ಆಡಲಿವೆ. ಅಂತರ್ ವಲಯದಲ್ಲಿ ತಲಾ ೭ ಪಂದ್ಯಗಳನ್ನಾಡಲಿವೆ. ನಂತರ ಪ್ಲೇ ಆ್ ನಡೆಯಲಿದೆ. ಪ್ಲೇ ಆ್‌ನಲ್ಲಿ ೩ ಎಲಿಮಿನೇಷನ್, ೨ ಕ್ವಾಲಿಯರ್ ಪಂದ್ಯಗಳು ನಡೆಯಲಿವೆ.

Related Articles