Thursday, December 12, 2024

ವಾರಿಯರ್ಸ್ ಗೆ ಮಣಿದ ಪಲ್ಟಾನ್

ದೆಹಲಿ:

ಅಮೋಘ ಆಟ ಪ್ರದರ್ಶನ ಪ್ರದರ್ಶನ ನೀಡಿದ ಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್‍ನ ಪಂದ್ಯದಲ್ಲಿ ಪುನೇರಿ ಪಲ್ಟಾನ್ ವಿರುದ್ಧ ಜಯ ಸಾಧಿಸಿತು.

ಮನೀಂದರ್(6), ರವೀಂದ್ರ ರಮೆಶ್(5) ಹಾಗೂ ಮಹೇಶ್ ಗೌಡ(3) ಅವರ ಚುರುಕಿನ ಆಟದ ನೆರವಿನಿಂದ ಬೆಂಗಾಲ್ ವಾರಿಯರ್ಸ್ ತಂಡ ಪಲ್ಟಾನ್ ವಿರುದ್ಧ 26-22 ಅಂತರದಲ್ಲಿ ಗೆಲುವಿನ ನಗೆ ಬೀರಿದರು. ವಾರಿಯರ್ಸ್ ತಂಡ 12 ರೈಡ್ ಅಂಕಗಳಿಸಿದರೆ, ಟ್ಯಾಕಲ್‍ನಲ್ಲಿ 10 ಅಂಕ ಪಡೆಯಿತು. ಆದರೆ, ಪುನೇರಿ ಪಲ್ಟಾನ್ ತಂಡ 13 ರೈಡಿಂಗ್ ಅಂಕ ಪಡೆದರೆ, ಟ್ಯಾಕಲ್ ನಲ್ಲಿ 6 ಅಂಕ ಗಳಿಸಿತು. ಪಲ್ಟಾನ್ ಪರ ಮೊರೆ 9, ಗಿರೀಶ್ ಎರ್ನಾಕ್ ಹಾಗೂ ಮೊನು ತಲಾ ಮೂರು ಅಂಕ ಗಳಿಸಿದರು.

Related Articles