Thursday, December 12, 2024

ಬುಲ್ಸ್ ಗೈಂಟ್ಸ್ ಪಂದ್ಯ ಡ್ರಾನಲ್ಲಿ ಅಂತ್ಯ

ದೆಹಲಿ:

ತೀವ್ರ ಕತೂಹಲ ಕೆರಳಿಸಿದ್ದ ಬೆಂಗಳೂರು ಬುಲ್ಸ್ ಹಾಗೂ ಫಾರ್ಚುನ್ ಗೈಂಟ್ಸ್ ತಂಡಗಳ ನಡುವಿನ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯವಾಯಿತು.

ಪ್ರೊ ಕಬಡ್ಡಿ ಪಂದ್ಯದಲ್ಲಿ ಎರಡೂ ತಂಡಗಳ ಸಮಬಲದ  ಪೈಪೋಟಿ ನೀಡುವ ಮೂಲಕ ಅಂತಿಮವಾಗಿ 30-30 ಅಂತರದಲ್ಲಿ ಡ್ರಾಗೆ ತೃಪ್ತಿಪಟ್ಟವು. ಅಮೋಘ ಆಟ ಪ್ರದರ್ಶನ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡದ ಪರ ಪವನ್ ಕುಮಾರ್ 10, ರೋಹಿತ್ ಕುಮಾರ್ 6 ಹಾಗೂ ಸಂದೀಪ್ 4 ಅಂಕ ಪಡೆದರು. ಫಾರ್ಚುನ್ ಗೈಂಟ್ಸ್ ಪರ ಸಚಿನ್ 11 , ಸುನೀಲ್ ಕುಮಾರ್ ಹಾಗೂ ರೋಹಿತ್ ಗುಲಿಯಾ ತಲಾ 4 ಅಂಕ ಪಡೆದರು.

Related Articles