ಭಾರತ ಎ ತಂಡಕ್ಕೆ ಬೃಹತ್ ಮುನ್ನಡೆ

0
190
ಮೌಂಟ್ ಮೌಂಗನ್ಯುಯಿ:  

ಪೃಥ್ವಿ ಶಾ, ಮುರಳಿ ವಿಜಯ್ ಹಾಗೂ ಹನುಮ ವಿಹಾರಿ ಅರ್ಧ ಶತಕ ಗಳಿಸುವುದರೊಂದಿಗೆ ನ್ಯೂಜಿಲೆಂಡ್ ಎ ವಿರುದ್ಧದ ನಾಲ್ಕು ದಿನಗಳ ಪಂದ್ಯದಲ್ಲಿ ಭಾರತ ಎ ತಂಡ 247 ರನ್ ಗಳ ಬೃಹತ್ ಮುನ್ನಡೆ ಕಂಡಿದ್ದು ಪಂದ್ಯ ಡ್ರಾ ಕಡೆಗೆ ಸಾಗಿದೆ.

 ಮಧ್ಯಮ ಕ್ರಮಾಂಕದ ಡೇನ್ ಕ್ಲೆವರ್(53) ಹಾಗೂ ಸೇಥ್ ರ್ಯಾನ್ಸ್(69*) ಅವರ ತಲಾ ಅರ್ಧ ಶತಕಗಳ ನೆರವಿನಿಂದ ನ್ಯೂಜಿಲೆಂಡ್(ಎ) ತಂಡ, ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ(ಎ) ವಿರುದ್ಧ 458 ರನ್ ಕಲೆಹಾಕುವ ಮೂಲಕ ದಿಟ್ಟ ಉತ್ತರ ನೀಡಿತ್ತು.
ಮೂರನೇ ದಿನ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಬ್ಯಾಟ್ಸ್ ಮನ್ ಹಮೀಶ್ ಋಥ್‍ಫರ್ಡ್ 114 ರನ್ ಗಳಿಸಿ ಔಟ್ ಆದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಡೇನ್ ಕ್ಲೆವರ್(53), ಡೌಗ್ ಬ್ರೆಸ್ ವೆಲ್(48), ಸೇಥ್ ರ್ಯಾನ್ಸ್(69*) ಹಾಗೂ ಬ್ಲೈರ್ ಟಿಕ್ಕರ್(30) ಅಮೋಘ ಬ್ಯಾಟಿಂಗ್ ಮಾಡಿದರು. ಇವರ ನೆರವಿನಿಂದ ನ್ಯೂಜಿಲೆಂಡ್ 134 ಓವರ್ ಗಳಿಗೆ 458 ರನ್ ದಾಖಲಿಸಿತು  ವೇಳೆ ನಾಯಕ ಡಿಕ್ಲೇರ್ ಘೋಷಣೆ ಮಾಡಿದರು. ಭಾರತ(ಎ) ಕೆ.ಗೌತಮ್ ಮೂರು ವಿಕೆಟ್ ಪಡೆದರು.